ರೋಹಿತ್​, ಕೊಹ್ಲಿ, ಅಯ್ಯರ್​... ಶೂನ್ಯಕ್ಕೆ ಮೂವರು ಸ್ಟಾರ್​ ಬ್ಯಾಟ್ಸ್​ಮನ್​​ ಡಕ್​ಔಟ್​ ಆದ ಕಳಪೆ ರೆಕಾರ್ಡ್​ ಇದೇ ಮೊದಲಲ್ಲ! IND vs NZ

 IND vs NZ
ರೋಹಿತ್​, ಕೊಹ್ಲಿ, ಅಯ್ಯರ್​... ಶೂನ್ಯಕ್ಕೆ ಮೂವರು ಸ್ಟಾರ್​ ಬ್ಯಾಟ್ಸ್​ಮನ್​​ ಡಕ್​ಔಟ್​ ಆದ ಕಳಪೆ ರೆಕಾರ್ಡ್​ ಇದೇ ಮೊದಲಲ್ಲ! IND vs NZ
Published on: 

IND vs NZ: ಇಂದು ನಡೆದ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 89 ರನ್​ಗೆ ಆಲ್​ಔಟ್ ಆಗುವ ಮೂಲಕ 244 ರನ್​ಗಳ ಭಾರಿ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಇಷ್ಟೇ ಅಲ್ಲದೇ, ಕಿವೀಸ್​ ನೀಡಿದ ಗುರಿಯನ್ನು ಬೆನ್ನತ್ತಿದ್ದ ಆರಂಭಿಕ ಓವರ್​ನಲ್ಲಿ ಒಂದೇ ಒಂದು ರನ್​ ಗಳಿಸದೆ ಮೂವರು ಸ್ಟಾರ್​ ಬ್ಯಾಟರ್​ಗಳು ಡಕ್​ಔಟ್​ ಆದ ಅತ್ಯಂತ ಕಳಪೆ ದಾಖಲೆಯನ್ನೂ ನಿರ್ಮಿಸಿದೆ.

ಕಿವೀಸ್ ಎದುರು ಹೀನಾಯ ಸೋಲು ಒಂದೆಡೆಯಾದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 0/3 ಸ್ಕೋರ್‌ನೊಂದಿಗೆ ತನ್ನ ಮೊದಲ ಮೂರು ಮುಖ್ಯ ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​ ಅವರ ವಿಕೆಟ್​ ಕಳೆದುಕೊಂಡ ಐದನೇ ತಂಡವಾಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್ ವಿರುದ್ಧ ಬೇ ಓವಲ್​ನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಈ ಕೆಟ್ಟ ದಾಖಲೆಯನ್ನು ದಾಖಲಿಸಿರುವುದು ಸದ್ಯ ಕ್ರಿಕೆಟ್​ ಪ್ರೇಮಿಗಳ ತೀವ್ರ ಬೇಸರಕ್ಕೆ ಕಾರಣವಾಗಿದೆ.

334 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ, ವೇಗಿ ಮ್ಯಾಟ್​ ಹೆನ್ರಿ ಅವರ ಮೊದಲ ಓವರ್​ನಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಸ್ಕೋರ್‌ಬೋರ್ಡ್‌ನಲ್ಲಿ ಒಂದೇ ಒಂದು ರನ್ ಗಳಿಸುವ ಮೊದಲೇ ಸ್ಟಾರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಡಕ್ ಆಗಿ ಪೆವಿಲಿಯನ್​ಗೆ ಹೋಗಿದ್ದು ಅಭಿಮಾನಿಗಳಿಂದ ನಂಬಲು ಅಸಾಧ್ಯ ಎನ್ನುವಂತಾಗಿದೆ. ಒಂದೇ ಓವರ್​ನಲ್ಲಿ ಮೂರು ವಿಕೆಟ್​ ಕಬಳಿಸುವ ಮೂಲಕ ಮ್ಯಾಟ್ ಹೆನ್ರಿ ತಮ್ಮ ಹೆಸರಿಗೊಂದು ಅಪರೂಪದ ದಾಖಲೆಯನ್ನು ಸೇರಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಮೊದಲಲ್ಲ!

ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಒಂದೇ ಒಂದು ರನ್ ಗಳಿಸದೆ ಮೂರು ವಿಕೆಟ್​ಗಳನ್ನು ಕಳೆದುಕೊಂಡ ತಂಡ ಭಾರತವೇ ಮೊದಲಲ್ಲ! ಈ ಪಟ್ಟಿಯಲ್ಲಿ ಪಾಕಿಸ್ತಾನ ಮುಂಚೂಣಿಯಲ್ಲಿದೆ. ಪಾಕ್​ ಈ ಹಿಂದೆ ಎರಡು ಬಾರಿ ಇಂತಹ ಪರಿಸ್ಥಿತಿಯನ್ನು ಎದುರಿಸಿದೆ. 1983ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು 1997ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು 0/3 ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಇನ್ನು, 2003ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಕೂಡ ಇದೇ ರೀತಿಯಲ್ಲಿ ವಿಕೆಟ್ ಕಳೆದುಕೊಂಡಿತು. 2026ರಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಒಂದು ರನ್ ಗಳಿಸುವ ಮೊದಲು ಆಸ್ಟ್ರೇಲಿಯಾ ಕೂಡ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತವು ಇತ್ತೀಚೆಗೆ ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಪಟ್ಟಿಯನ್ನು ಸೇರಿಕೊಂಡಿತು ಎಂಬುದು ಗಮನಾರ್ಹ.

Also Read
ಕಿವೀಸ್​​ ವಿರುದ್ಧ ಭಾರತಕ್ಕೆ ಹೀನಾಯ ಸೋಲು: ರೋಹಿತ್, ಕೊಹ್ಲಿ, ಶ್ರೇಯಸ್ ಡಕ್​ ಔಟ್​, 89 ರನ್​ಗೆ ಆಲೌಟ್​! India vs New Zealand 4th ODI
 IND vs NZ

ಭರವಸೆಯ ಬ್ಯಾಟರ್ಸ್​ ವಿಫಲ!

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಡಕ್ ಔಟ್ ಆಗಿದ್ದು, ಕ್ರಿಕೆಟ್​ ಪ್ರೇಮಿಗಳಿಗೆ ಅಕ್ಷರಶಃ ಶಾಕಿಂಗ್ ಆಗಿತ್ತು. ಒಂದೇ ಏಕದಿನ ಪಂದ್ಯದಲ್ಲಿ ಇಬ್ಬರೂ ಖಾತೆ ತೆರೆಯದೆ ಔಟಾಗಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2010ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಮತ್ತು ಕೊಹ್ಲಿ, ಇದೇ ರೀತಿ ಶೂನ್ಯಕ್ಕೆ ಡಕ್ ಔಟ್ ಆಗಿದ್ದರು,(ಏಜೆನ್ಸೀಸ್).