Team India: ಟೀಮ್ ಇಂಡಿಯಾದಲ್ಲಿ ಆಂತರಿಕ ಸಮಸ್ಯೆಗಳು ನಿನ್ನೆ, ಮೊನ್ನೆಯ ವಿಷಯವೇನಲ್ಲ. ಇದು ಬಹಳ ಸಮಯದಿಂದಲೂ ಸದ್ದು ಮಾಡುತ್ತಿರುವ ಟಾಪಿಕ್. ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಹೆಡ್ ಕೋಚ್ ಗೌತಮ್ ಗಂಭೀರ್ ಅವರೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಕೊಡುವಂತೆ ಒತ್ತಾಯಿಸಿದರು ಎಂಬ ಊಹಾಪೋಹಗಳು ಇಂದಿಗೂ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ. ಆದರೆ, ಇವೆಲ್ಲವೂ ನೆಟ್ಟಿಗರ ಟೀಕೆಗೆ, ಆರೋಪಕ್ಕಷ್ಟೇ ಸೀಮಿತವಾಗಿವೆ ಹೊರತು ಯಾವುದಕ್ಕೂ ಗಟ್ಟಿಯಾದ ಆಧಾರಗಳಿಲ್ಲ.