ರವಿ ಬಿಷ್ಣೋಯ್ ಅವರು ಐಪಿಎಲ್ 2026 ರಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡದ ಪರವಾಗಿ ಕನಿಷ್ಠ ಅರ್ಧದಷ್ಟು ಪಂದ್ಯಗಳನ್ನೂ ಆಡಿರಲಿಲ್ಲ, ಹಾಗಿರುವಾಗ ಅಂತಹ ಆಟಗಾರನನ್ನು ನೇರವಾಗಿ ಅಂತಾರಾಷ್ಟ್ರೀಯ ಪಂದ್ಯದ ಪ್ಲೇಯಿಂಗ್ ಇಲೆವೆನ್‌ಗೆ ಹೇಗೆ ಆಯ್ಕೆ ಮಾಡಲಾಯಿತು ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ. ಆಟಗಾರರ ಹಳೆಯ ದಾಖಲೆಗಳನ್ನು ನೋಡಿ ತಂಡಕ್ಕೆ ಆಯ್ಕೆ ಮಾಡುವುದು ಸರಿಯಲ್ಲ, ಪ್ರಸ್ತುತ ಅವರ ಫಾರ್ಮ್ ಹೇಗಿದೆ ಎಂಬುದನ್ನು ಮಾತ್ರ ಮಾನದಂಡವಾಗಿ ತೆಗೆದುಕೊಳ್ಳಬೇಕು ಎಂದು ಅವರು ಮ್ಯಾನೇಜ್‌ಮೆಂಟ್‌ಗೆ ಕಿವಿಮಾತು ಹೇಳಿದ್ದಾರೆ.