ಮಾಜಿ ಕ್ರಿಕೆಟರ್ ಶ್ರೀವತ್ಸ್ ಗೋಸ್ವಾಮಿ ಮಾತನಾಡಿ, "ವಿರಾಟ್ ಕೊಹ್ಲಿ ಏಕದಿನ ಪಂದ್ಯಕ್ಕೆ ಗುಡ್ಬೈ ಹೇಳಬೇಕಿತ್ತೇ ವಿನಃ ಟೆಸ್ಟ್ಗಲ್ಲ. ನಿಜಕ್ಕೂ ಟೆಸ್ಟ್ ಕ್ರಿಕೆಟ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಈ ಫಾರ್ಮೆಟ್ಗೆ ಅವರ ಕೊಡುಗೆ ಅಪಾರ. ಕೇವಲ ಒಬ್ಬ ಆಟಗಾರ ಎಂದಲ್ಲ. ಟೆಸ್ಟ್ಗೆ ಅವರು ತರುತ್ತಿದ್ದ ಎನರ್ಜಿ, ಪ್ರೀತಿ, ಉತ್ಸಾಹದ ಆಟ ತಂಡಕ್ಕೆ ಸೋಲಿನ ಭಯವನ್ನು ದೂರ ಮಾಡುತ್ತಿತ್ತು. ಎಂಥಾ ಕಠಿಣ ಸಂದರ್ಭದಲ್ಲಿಯೂ ಗೆಲುವಿನ ಭರವಸೆ ಉಳಿಯುವಂತೆ ಮಾಡುತ್ತಿದ್ದರು" ಎಂದಿದ್ದಾರೆ.