ತವರಲ್ಲಿ ನಡೆಯಲಿರೋ ಸರಣಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: 22 ಪಂದ್ಯಗಳು, ಬೆಂಗ್ಳೂರಿಗರಿಗೂ ಗುಡ್​ ನ್ಯೂಸ್​! Team India

ತವರಲ್ಲಿ ನಡೆಯಲಿರೋ ಸರಣಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: 22 ಪಂದ್ಯಗಳು, ಬೆಂಗ್ಳೂರಿಗರಿಗೂ ಗುಡ್​ ನ್ಯೂಸ್​! Team India
ತವರಲ್ಲಿ ನಡೆಯಲಿರೋ ಸರಣಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: 22 ಪಂದ್ಯಗಳು, ಬೆಂಗ್ಳೂರಿಗರಿಗೂ ಗುಡ್​ ನ್ಯೂಸ್​! Team India
Published on

ಪ್ರಮುಖ ಮುಖ್ಯಾಂಶಗಳು

  • 2026-27ರ ಋತುವಿಗಾಗಿ ಟೀಮ್ ಇಂಡಿಯಾದ ತವರು ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
  • ಭಾರತ ಪ್ರವಾಸ ಕೈಗೊಳ್ಳಲಿವೆ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ತಂಡಗಳು
  • 9 ಏಕದಿನ ಪಂದ್ಯಗಳು, 8 ಟಿ20 ಮತ್ತು 5 ಟೆಸ್ಟ್‌ ಪಂದ್ಯಗಳು ತವರಿನಲ್ಲಿ ನಡೆಯಲಿವೆ
Team India : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2026-27ರ ಋತುವಿಗಾಗಿ ಟೀಮ್ ಇಂಡಿಯಾದ ತವರು ವೇಳಾಪಟ್ಟಿಯನ್ನು ಇಂದು (ಮಾರ್ಚ್​ 26) ಬಿಡುಗಡೆ ಮಾಡಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತ ಪ್ರವಾಸವನ್ನು ಕೈಗೊಳ್ಳಲಿವೆ. ಒಟ್ಟು 22 ಪಂದ್ಯಗಳನ್ನು ಆಡಲಾಗುವುದು. ಇದರಲ್ಲಿ 9 ಏಕದಿನ ಪಂದ್ಯಗಳು, 8 ಟಿ20 ಮತ್ತು 5 ಟೆಸ್ಟ್‌ ಪಂದ್ಯಗಳು ಸೇರಿವೆ.
ಸೆಪ್ಟೆಂಬರ್‌ ತಿಂಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಭಾರತದ ತವರು ಸೀಸನ್ ಆರಂಭವಾಗಲಿದೆ. ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ತಿರುವನಂತಪುರ, ಗುವಾಹಟಿ ಮತ್ತು ನ್ಯೂ ಚಂಡೀಗಢ ಏಕದಿನ ಪಂದ್ಯಗಳನ್ನು ಮತ್ತು ಲಖನೌ, ರಾಂಚಿ, ಇಂದೋರ್ ಮತ್ತು ಹೈದರಾಬಾದ್ ಟಿ20 ಪಂದ್ಯಗಳನ್ನು ಆಯೋಜಿಸಲಿವೆ.
ಶ್ರೀಲಂಕಾ ತಂಡ ಡಿಸೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಭಾರತ ಮತ್ತು ಶ್ರೀಲಂಕಾ ಮೂರು ಏಕದಿನ ಮತ್ತು ಮೂರು ಟಿ20ಐ ಪಂದ್ಯಗಳನ್ನು ಆಡಲಿವೆ. ದೆಹಲಿ, ಬೆಂಗಳೂರು ಮತ್ತು ಅಹಮದಾಬಾದ್​ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯಗಳನ್ನು ಮತ್ತು ರಾಜ್‌ಕೋಟ್, ಕಟಕ್ ಮತ್ತು ಪುಣೆ ಕ್ರೀಡಾಂಗಣಗಳಲ್ಲಿ ಟಿ20 ಪಂದ್ಯಗಳನ್ನು ಆಯೋಜಿಸಲಿವೆ.
ಭಾರತ ತಂಡ ಮುಂದಿನ ವರ್ಷದ ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು, ನಂತರ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯ ಕೋಲ್ಕತ, ಹೈದರಾಬಾದ್​ ಮತ್ತು ಮುಂಬೈ ಕ್ರೀಡಾಂಗಣದಲ್ಲಿ ನಡೆಯಲಿವೆ. ಆಸ್ಟ್ರೇಲಿಯಾದ ವಿರುದ್ಧ ನಾಗ್ಪುರ, ಚೆನ್ನೈ, ಗುವಾಹಟಿ, ರಾಂಚಿ ಹಾಗೂ ಅಹಮದಾಬಾದ್​ ಕ್ರೀಡಾಂಗಣದಲ್ಲಿ ಟೆಸ್ಟ್​ ಪಂದ್ಯಗಳು ನಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net