2ನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ವಿಫಲ! ಭರ್ಜರಿ ಲೀಡ್​ನಲ್ಲಿ ಹರಿಣರ ಪಡೆ! ಭಾರತಕ್ಕೆ ಗೆಲುವು ಕಷ್ಟಸಾಧ್ಯ

ಭಾರತ- ದಕ್ಷಿಣ ಆಫ್ರಿಕಾ
ಭಾರತ- ದಕ್ಷಿಣ ಆಫ್ರಿಕಾ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್‌ಗೆ ಆಲೌಟ್ ಆಯಿತು
  • ದಕ್ಷಿಣ ಆಫ್ರಿಕಾ 288 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು
  • ಡ್ರಾ ಮಾಡಿಕೊಳ್ಳಲು ಪವಾಡವೇ ನಡೆಯಬೇಕಿದೆ
IND vs SA: ಇಂದು (ನ.24) ಗುವಾಹಟಿಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದರೊಂದಿಗೆ, ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್‌ಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ 288 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಭಾರತವನ್ನು ಫಾಲೋ ಮಾಡಲು ಅವಕಾಶವಿದ್ದರೂ, ದಕ್ಷಿಣ ಆಫ್ರಿಕಾದ ಕ್ಯಾಪ್ಟನ್​ ಬವುಮಾ ಅದನ್ನು ನಿರಾಕರಿಸಿದರು.
ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದ್ದ ಕಾರಣ ಅವರು ಈ ನಿರ್ಧಾರ ತೆಗೆದುಕೊಂಡರು ಎಂಬುದು ಸ್ಪಷ್ಟ. ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳಲ್ಲಿ ಯಶಸ್ವಿ ಜೈಸ್ವಾಲ್ (59 ರನ್​, 97 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕ ಗಳಿಸಿದರು. ವಾಷಿಂಗ್ಟನ್ ಸುಂದರ್ (48 ರನ್​, 92 ಎಸೆತ, 2 ಬೌಂಡರಿ, 1 ಸಿಕ್ಸರ್) ಅಮೋಘ ಪ್ರದರ್ಶನ ನೀಡಿದರು. ಇನ್ನು ಕೆ.ಎಲ್. ರಾಹುಲ್ (22) ಮತ್ತು ಕುಲದೀಪ್ ಯಾದವ್ (19) ಹೆಚ್ಚು ಸಮಯ ನಿಂತು ಪ್ರದರ್ಶನ ನೀಡಲಿಲ್ಲ.
ಧ್ರುವ್ ಜುರೆಲ್ ಶೂನ್ಯಕ್ಕೆ ಔಟಾದರೆ, ಸಾಯಿ ಸುದರ್ಶನ್ (15), ರಿಷಭ್ ಪಂತ್ (7), ರವೀಂದ್ರ ಜಡೇಜಾ (6) ಮತ್ತು ನಿತೀಶ್ ಕುಮಾರ್ ರೆಡ್ಡಿ (10) ಕಳಪೆ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ಆರು ವಿಕೆಟ್, ಸೈಮನ್ ಹಾರ್ಮರ್ ಮೂರು ವಿಕೆಟ್ ಮತ್ತು ಕೇಶಮ್ ಮಹಾರಾಜ್ ಒಂದು ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್ ಗಳಿಸಿತು. ಈ ಪಂದ್ಯದಲ್ಲಿ ಗೆಲುವಿನಿಂದ ದೂರ ಉಳಿದಿರುವ ಭಾರತ, ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪವಾಡವೇ ನಡೆಯಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net