ಈ ಕಾರಣಕ್ಕೆ ಸರಣಿಯಿಂದ ಕೈಬಿಟ್ಟೆವು! ಐರ್ಲೆಂಡ್​ ಎದುರು ಹೀನಾಯ ಸೋಲುಂಡ ಬೆನ್ನಲ್ಲೇ ಮೌನಮುರಿದ ಕೋಚ್​

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ವೈಭವ್​ಗೆ ತಂಡದಲ್ಲಿ ಅವಕಾಶ ಕೊಡದಿದ್ದೇ ಸೋಲಿಗೆ ಕಾರಣ
  • ವೈಭವ್ ಸೂರ್ಯವಂಶಿಗೆ ಚಾನ್ಸ್​ ಏಕೆ ಕೊಟ್ಟಿಲ್ಲ ಪ್ರಶ್ನೆಗೆ ಸಹಾಯಕ ಕೋಚ್​ ಉತ್ತರ
Vaibhav Sooryavanshi: ಬೆಲ್​ಫಾಸ್ಟ್​ನಲ್ಲಿ ನಡೆದ ಐರ್ಲೆಂಡ್​ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನೂ ಟೀಮ್ ಇಂಡಿಯಾದ ಬಹಳ ಸುಲಭವಾಗಿ ಕೈಚೆಲ್ಲಿತು. 1050 ದಿನಗಳ ಬಳಿಕ ಟೀಮ್ ಇಂಡಿಯಾ ಕ್ರಿಕೆಟ್​ ಶಿಶು ಎದುರು ಸರಣಿ ಸೋತಿದ್ದು ಇದೇ ಮೊದಲು. ಈ ಪಂದ್ಯದಲ್ಲಿನ ಕಳಪೆ ಪ್ರದರ್ಶನ ಮತ್ತು ವೈಭವ್​ ಸೂರ್ಯವಂಶಿಯಿಂದ ಅವಕಾಶ ಕಸಿದುಕೊಂಡ ಹೆಡ್​ ಕೋಚ್​ ಗೌತಮ್ ಗಂಭೀರ್​ರನ್ನು ಕ್ರಿಕೆಟ್​ ಪ್ರೇಮಿಗಳು ಸದ್ಯ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಯಾಕಾಗಿ ವೈಭವ್​ರನ್ನು ಕೈಬಿಡಲಾಯಿತು ಎಂಬುದಕ್ಕೆ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಪ್ರತಿಕ್ರಿಯಿಸಿದ್ದಾರೆ.
ಮೊದಲ ಮತ್ತು ಎರಡನೇ ಪಂದ್ಯದಿಂದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಅವರನ್ನು ಐರ್ಲೆಂಡ್​ ವಿರುದ್ಧದ ಸರಣಿಯಿಂದ ಕೈಬಿಡಲಾಯಿತು. ಇದನ್ನು ಭಾರಿ ಟೀಕಿಸಿದ ಕ್ರಿಕೆಟ್​ ಅಭಿಮಾನಿಗಳು, ತಂಡದ ಸೋಲಿಗೆ ಟಾಪ್​ ಆರ್ಡರ್​ ಬ್ಯಾಟಿಂಗ್​ ವೈಫಲ್ಯವೇ ಮುಖ್ಯ ಕಾರಣ. ಮೊದಲ ಮ್ಯಾಚ್​ನಲ್ಲೇ ಅತ್ಯಂತ ಕಳಪೆ ಪ್ರದರ್ಶನದಿಂದ ಸೋತ ತಂಡಕ್ಕೆ ವೈಭವ್​ ಉಪಸ್ಥಿತಿ ಹೆಚ್ಚಿತ್ತು. ಇಷ್ಟಾದರೂ ಅವರ ಬದಲಿಗೆ ಇಬ್ಬರೂ ಆಟಗಾರರಿಗೆ ಅವಕಾಶ ಕೊಟ್ಟಿದ್ದಕ್ಕೆ ಅಸಮಾಧಾನ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಮಾತನಾಡಿರುವ ರಯಾನ್​, ವೈಭವ್​ ಒಬ್ಬ ಅದ್ಭುತ ಪ್ರತಿಭೆ ಅದರಲ್ಲಿ ಎರಡನೇ ಮಾತಿಲ್ಲ ಎಂದಿದ್ದಾರೆ.
ದೇಶಿಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಲು ಅವರು ರೆಡಿಯಿದ್ದಾರೆ. ಆದರೆ, ಈಗಾಗಲೇ ಅನುಭವ ಹೊಂದಿರುವ ಆಟಗಾರರನ್ನು ತಂಡದಿಂದ ಕೈಬಿಟ್ಟು, ಅವರನ್ನು ಕಣಕ್ಕಿಳಿಸುವುದು ಸರಿಯಾದ ನಿರ್ಧಾರವಲ್ಲ ಎಂದು ಮ್ಯಾನೇಜ್​ಮೆಂಟ್​ ಭಾವಿಸಿತು. ಈಗಿರುವ ತಂಡವನ್ನು ಬ್ಯಾಲೆನ್ಸ್ ಮಾಡುವುದು​ ಮತ್ತು ಲಾಂಗ್ ಟರ್ಮ್​ ಪ್ಲ್ಯಾನ್​ ಅನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಮರ್ಥಿಸಿಕೊಂಡರು.
ವೈಭವ್​ಗೆ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿರುವ ಕ್ರಿಕೆಟ್​ ಅಭಿಮಾನಿಗಳ ಹೆಬ್ಬಯಕೆಯನ್ನು ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಾದರೂ ಮ್ಯಾನೇಜ್​ಮೆಂಟ್​ ಈಡೇರಿಸಲಿದೆಯಾ? ವೈಭವ್ ಸೂರ್ಯವಂಶಿಗೆ ಈ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿದ್ಯಾ ಅಥವಾ ಮತ್ತೊಮ್ಮೆ ಅವರನ್ನು ಬೆಂಚ್‌ನಲ್ಲಿ ಕೂರಿಸುವುದಕ್ಕಷ್ಟೇ ಸೀಮಿತ ಮಾಡ್ತಾರಾ ಎಂಬ ಚರ್ಚೆಗಳು ಜೋರಾಗಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net