ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 254 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದ್ದ ಇಂಗ್ಲೆಂಡ್ ಸೋಲಲು ಬುಮ್ರಾ ಎಸೆದ 18ನೇ ಓವರ್ ಪ್ರಮುಖ ಕಾರಣವಾಗಿತ್ತು. ಕೇವಲ 6 ರನ್ ನೀಡಿ ಪಂದ್ಯವನ್ನು ಭಾರತದತ್ತ ತಿರುಗಿಸಿದ್ದ ಬುಮ್ರಾ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಿಪ್ಸ್, "ಬುಮ್ರಾ ಕೂಡ ಮನುಷ್ಯನೇ. ನಮಗಿರುವಂತೆ ಅವರಿಗೂ ಕೆಟ್ಟ ದಿನವಿರಲು ಸಾಧ್ಯವಿದೆ. ಭಾನುವಾರ ಅವರಿಗೆ ಅಂತಹ ದಿನವಾಗಲಿ ಎಂದು ನಾವು ಆಶಿಸುತ್ತೇವೆ," ಎಂದಿದ್ದಾರೆ.