ವಿಶ್ವ ವಿಜೇತ ಭಾರತ ತಂಡದ ಆಟಗಾರರ ಬ್ರ್ಯಾಂಡ್ ಮೌಲ್ಯ ಹೆಚ್ಚಳ!

ವಿಶ್ವ ವಿಜೇತ ಭಾರತ ತಂಡದ ಆಟಗಾರರ ಬ್ರ್ಯಾಂಡ್ ಮೌಲ್ಯ ಹೆಚ್ಚಳ!
ವಿಶ್ವ ವಿಜೇತ ಭಾರತ ತಂಡದ ಆಟಗಾರರ ಬ್ರ್ಯಾಂಡ್ ಮೌಲ್ಯ ಹೆಚ್ಚಳ!
Published on
ನವದೆಹಲಿ: ಸತತ 2ನೇ ಬಾರಿ ಟಿ20 ವಿಶ್ವಕಪ್ (T20 World Cup)​ ಎತ್ತಿಹಿಡಿದ ಸೂರ್ಯಕುಮಾರ್​ ಯಾದವ್​ ಬಳಗ ಈಗಾಗಲೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಜತೆಗೆ ಐಸಿಸಿ, ಬಿಸಿಸಿಐನಿಂದ ಭಾರಿ ಬಹುಮಾನ ಮೊತ್ತವೂ ಲಭಿಸಿದೆ. ಇದರೊಂದಿಗೆ ಆಟಗಾರರ ವೈಯಕ್ತಿಕ ಬ್ರ್ಯಾಂಡ್​ ಮೌಲ್ಯವೂ ಭಾರಿ ಹೆಚ್ಚಳ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಾಯಕ ಸೂರ್ಯಕುಮಾರ್​ ಮತ್ತು ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಅವರ ವಾರ್ಷಿಕ ಬ್ರ್ಯಾಂಡ್ ಮೌಲ್ಯ ಈಗ ಎರಡಂಕಿ ಕೋಟಿ ರೂ. ತಲುಪಿದೆ. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್​ ಮತ್ತು ಇಶಾನ್​ ಕಿಶನ್​ ಬ್ರ್ಯಾಂಡ್​ ಮೌಲ್ಯ ಕೂಡ ದೊಡ್ಡ ಮಟ್ಟದ ಪ್ರಗತಿ ಸಾಧಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ತಂಡದಲ್ಲಿರುವ ಇತರ ಯುವ ಆಟಗಾರರಿಗೂ ಉತ್ತಮ ಜಾಹೀರಾತು ಒಪ್ಪಂದಗಳು ಲಭಿಸುವ ನಿರೀಕ್ಷೆ ಹರಡಿದೆ.

ಟಿ20 ವಿಶ್ವಕಪ್​ ಗೆಲುವಿನ ಬಳಿಕ ಸುಮಾರು 35 ಬ್ರಾ$್ಯಂಡ್​ಗಳು ಭಾರತ ತಂಡದ ಆಟಗಾರರ ಬೆನ್ನು ಹತ್ತುವ ನಿರೀಕ್ಷೆ ಇದೆ. ಫೈನಲ್​ ಹೀರೋ ಬುಮ್ರಾ ಅವರ ಬ್ರ್ಯಾಂಡ್​ ಮೌಲ್ಯ ಶೇ.40 ಪ್ರಗತಿ ಕಾಣಲಿದೆ. ವಾಣಿಜ್ಯ ಮಾರುಕಟ್ಟೆಯಲ್ಲಿ ಸ್ಯಾಮ್ಸನ್​, ಕಿಶನ್​ ಭಾರತೀಯ ಕ್ರಿಕೆಟ್​ನ ಹೊಸಮುಖಗಳಾಗಿ ಆಕರ್ಷಣೆ ಪಡೆದುಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net