ಜಸ್ಪ್ರೀತ್ ಬುಮ್ರಾ, ಟೀಮ್ ಇಂಡಿಯಾದ ಪ್ರಮುಖ ಬೌಲರ್ಗಳಲ್ಲಿ ಒಬ್ಬರು. ಅವರ ಕೈಯಲ್ಲಿ ಚೆಂಡು ಇದ್ದಾಗ, ಏನು ಬೇಕಾದರೂ ನಡೆಯುತ್ತದೆ ಅನ್ನೋದು ನಿಮಗೆ ತಿಳಿದಿರುತ್ತದೆ. ವಿಶೇಷವಾಗಿ, ಶಿಮ್ರಾನ್ ಹೆಟ್ಮೆಯರ್ ಈ ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡುತ್ತಿದ್ದರು. ಆದರೆ, ಬುಮ್ರಾ ಅವರನ್ನು ಬೇಗನೆ ಔಟ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು. ಹೆಟ್ಮೆಯರ್ ವಿಕೆಟ್ ಪಡೆದದ್ದು ಈ ಪಂದ್ಯದ ತಿರುವು. ಆದಾಗ್ಯೂ, ನಾವು 190 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಗೆಲ್ಲುವ ಅವಕಾಶಗಳನ್ನು ಸೃಷ್ಟಿಸಿದೆವು ಎಂದು ಹೋಪ್ ಹೇಳಿದರು.