ವಿಶ್ವಕಪ್ ಫೈನಲ್‌ಗೆ ರೈಲ್ವೆ ಬಂಪರ್ ಗಿಫ್ಟ್: ದೆಹಲಿಯಿಂದ ಅಹಮದಾಬಾದ್‌ಗೆ ವಿಶೇಷ ರೈಲು ಘೋಷಣೆ! T20 World Cup

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 08 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯ
  • ಫೈನಲ್​ ಪಂದ್ಯದ ಟಿಕೆಟ್​ಗಳು ತಡವಾಗಿ ಬಿಡುಗಡೆಯಾಗಿದ್ದರಿಂದ ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ
  • ವಿಮಾನ ದರದಿಂದ ದಿಗ್ಭ್ರಮೆಗೊಂಡಿದ್ದ ಅಭಿಮಾನಿಗಳಿಗೆ ವಿಶೇಷ ರೈಲು ಸಂಜೀವಿನಿಯಂತೆ ಬಂದೊದಗಿದೆ
ನವದೆಹಲಿ: ಕ್ರಿಕೆಟ್ ಲೋಕದ ಮಹಾಹೋರಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಾನುವಾರ (ಮಾ.08) ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ಟಿ20 ವಿಶ್ವಕಪ್ 2026ರ (T20 World Cup) ಫೈನಲ್ ಪಂದ್ಯವನ್ನು ಅಭಿಮಾನಿಗಳು ವೀಕ್ಷಿಸಲು ಉತ್ತರ ರೈಲ್ವೆ ದೆಹಲಿಯಿಂದ ಸಬರಮತಿಗೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ.

ವಿಮಾನ ದರ ಏರಿಕೆ: ಕಂಗೆಟ್ಟಿದ್ದ ಅಭಿಮಾನಿಗಳಿಗೆ ರೈಲ್ವೆ ಆಸರೆ

ಫೈನಲ್​ ಪಂದ್ಯದ ಟಿಕೆಟ್​ಗಳು ತಡವಾಗಿ ಬಿಡುಗಡೆಯಾಗಿದ್ದರಿಂದ, ಅಭಿಮಾನಿಗಳಿಗೆ ಮುಂಚಿತವಾಗಿ ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ, ವಿಮಾನದ ಟಿಕೆಟ್​ ದರಗಳು ಗಗನಕ್ಕೇರಿದವು. ವಿಮಾನ ದರದಿಂದ ದಿಗ್ಭ್ರಮೆಗೊಂಡಿದ್ದ ಅಭಿಮಾನಿಗಳಿಗೆ ವಿಶೇಷ ರೈಲು ಸಂಜೀವಿನಿಯಂತೆ ಬಂದೊದಗಿದೆ.
ಈ ರೈಲು ಮಾರ್ಚ್ 7 ರಂದು ರಾತ್ರಿ 11:45 ಕ್ಕೆ ನವದೆಹಲಿ ರೈಲು ನಿಲ್ದಾಣದಿಂದ ಹೊರಟು ಮಾರ್ಚ್​ 08 ಮಧ್ಯಾಹ್ನ 2:30 ಕ್ಕೆ ಸಬರಮತಿಯನ್ನು ತಲುಪಲಿದೆ. ಆದಾಗ್ಯೂ, ದೆಹಲಿ ಕ್ಯಾಂಟ್, ಗುರುಗ್ರಾಮ್ ಮತ್ತು ಜೈಪುರ ಮೂಲಕ ಹಾದುಹೋಗಲಿದೆ. ರೈಲು ಸಂಖ್ಯೆ 04062 ಮೂರನೇ ಎಸಿ ಮತ್ತು ಎರಡನೇ ಎಸಿ ಕೋಚ್‌ಗಳು ಸೇರಿದಂತೆ ಒಟ್ಟು 19 ಬೋಗಿಗಳನ್ನು ಹೊಂದಿರುತ್ತದೆ.

ತಡರಾತ್ರಿ ಅಹಮದಾಬಾದ್​ಗೆ ತಲುಪಿದ ಭಾರತ

ಭಾರತ ತಂಡ ಮಾರ್ಚ್ 6 ರಂದು ಅಹಮದಾಬಾದ್ ತಲುಪಿದ್ದು, ಇಂದು ಸಂಜೆ 6 ರಿಂದ 9 ರವರೆಗೆ ತರಬೇತಿಯಲ್ಲಿ ತೊಡಗಲಿದ್ದಾರೆ. ಮತ್ತೊಂದೆಡೆ, ನ್ಯೂಜಿಲೆಂಡ್ ಮಧ್ಯಾಹ್ನ 2 ರಿಂದ 5 ರವರೆಗೆ ತರಬೇತಿ ನೀಡಲಿದ್ದು, ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಭಾರತದ ಕಳಪೆ ದಾಖಲೆ

ಭಾರತ ವಿರುದ್ಧ ಕಿವೀಸ್​ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅಜೇಯರಾಗಿ ಉಳಿದಿದೆ. ಆದರೆ, ಈ ಬಾರಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಇತಿಹಾಸವನ್ನು ಪುನಃ ಬರೆಯುವ ಅವಕಾಶವನ್ನು ಹೊಂದಿದೆ. ಸತತ ಆವೃತ್ತಿಗಳಲ್ಲಿ ಜಾಗತಿಕ ಟೂರ್ನಿಮೆಂಟ್​ನಲ್ಲಿ ಗೆದ್ದು ಮೊದಲ ತಂಡವಾಗಿ ಹೊರಹೊಮ್ಮುವ ಗುರಿಯನ್ನು ಹೊಂದಿದ್ದಾರೆ.
ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನಿಂದ ಭಾರತ ತಂಡ ಸಾಕಷ್ಟು ಆತ್ಮವಿಶ್ವಾಸವನ್ನು ಹೊಂದಿದೆ. ಆದರೆ, ಭಾರತೀಯ ಶಿಬಿರದಲ್ಲಿ ಎಲ್ಲವೂ ಸರಿಯಾಗಿಲ್ಲ. ಅಭಿಷೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಅವರ ಆಟದ ಶೈಲಿ ಮತ್ತಷ್ಟು ಕಳವಳಕಾರಿಯಾಗಿದೆ. ಈ ಇಬ್ಬರೂ ಐಸಿಸಿಯ ನಂಬರ್ ಒನ್ ಶ್ರೇಯಾಂಕಿತ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net