ಟಿ20 ವಿಶ್ವಕಪ್​: ಮಾರ್ಕ್ರಮ್ ಆರ್ಭಟ, ಸೂಪರ್ 8 ಹಂತಕ್ಕೆ ದ.ಆಫ್ರಿಕಾ

ಟಿ20 ವಿಶ್ವಕಪ್​: ಮಾರ್ಕ್ರಮ್ ಆರ್ಭಟ, ಸೂಪರ್ 8 ಹಂತಕ್ಕೆ ದ.ಆಫ್ರಿಕಾ
ಟಿ20 ವಿಶ್ವಕಪ್​: ಮಾರ್ಕ್ರಮ್ ಆರ್ಭಟ, ಸೂಪರ್ 8 ಹಂತಕ್ಕೆ ದ.ಆಫ್ರಿಕಾ
Published on
ಅಹಮದಾಬಾದ್: ಹಾಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಟಿ20 ವಿಶ್ವಕಪ್ 10ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಸರ್ವಾಂಗೀಣ ನಿರ್ವಹಣೆ ತೋರಿದ ಏಡನ್ ಮಾರ್ಕ್ರಮ್ ಬಳಗ ಡಿ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 7 ವಿಕೆಟ್‌ಗಳ ಗೆಲುವು ದಾಖಲಿಸಿತು. ಹ್ಯಾಟ್ರಿಕ್ ಜಯ ಸಾಧಿಸಿದ ಹರಿಣಗಳ ಪಡೆ ಡಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.
ನಮೋ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಪಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್, ಆಲ್ರೌಂಡರ್ ಮಾರ್ಕೋ ಯಾನ್ಸೆನ್ (40ಕ್ಕೆ 4) ದಾಳಿಗೆ ತತ್ತರಿಸಿ 7 ವಿಕೆಟ್‌ಗೆ 175 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ನಾಯಕ ಏಡನ್ ಮಾರ್ಕ್ರಮ್ (86*ರನ್, 44 ಎಸೆತ, 8 ಬೌಂಡರಿ, 4 ಸಿಕ್ಸರ್) ಬಿರುಸಿನ ಆಟದ ಬಲದಿಂದ 17 ಎಸೆತ ಬಾಕಿಯಿರುವಂತೆಯೇ 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 178 ರನ್‌ಗಳಿಸಿದ ದ.ಆಫ್ರಿಕಾ ಸುಲಭ ಜಯ ಕಂಡಿತು.
ನ್ಯೂಜಿಲೆಂಡ್: 7 ವಿಕೆಟ್‌ಗೆ 175 (ಟಿಮ್ ಸೀರ್ಟ್ 13, ಫಿನ್ ಆಲೆನ್ 31, ರಚಿನ್ 13, ಚಾಪ್‌ಮನ್ 48, ಡೆರಿಲ್ ಮಿಚೆಲ್ 32, ನಿಶಾಮ್ 23*, ಮ್ಯಾಟ್ ಹೆನ್ರಿ 9*, ಮಾರ್ಕೋ ಯಾನ್ಸೆನ್ 40ಕ್ಕೆ 4, ಕೇಶವ್ 24ಕ್ಕೆ 1)
 ದ.ಆಫ್ರಿಕಾ: 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 178 (ಮಾರ್ಕ್ರಮ್ 86*, ಡಿಕಾಕ್ 20, ರಿಕೆಲ್‌ಟನ್ 21, ಬ್ರೆವಿಸ್ 21, ಮಿಲ್ಲರ್ 24*, ರಚಿನ್ 9ಕ್ಕೆ 1).
ಪಂದ್ಯಶ್ರೇಷ್ಠ:ಮಾರ್ಕೋ ಯಾನ್ಸೆನ್  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net