2007ರಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿದ್ದ ಭಾರತ ನಂತರ ಮತ್ತೊಮ್ಮೆ ಟ್ರೋಫಿಗೆ ಮುತ್ತಿಡಲು 17 ವರ್ಷಗಳ ಕಾಲ ಕಾದಿತ್ತು. ಆದರೆ 3ನೇ ಬಾರಿ ಪ್ರಶಸ್ತಿ ಗೆಲ್ಲಲು ಅಷ್ಟು ಸಮಯ ಕಾಯಬೇಕಾಗಿಲ್ಲ ಎಂಬ ಭರವಸೆ ಮೂಡಿದೆ. ಯಾಕೆಂದರೆ ಈ ಬಾರಿಯ ತಂಡ ಅಷ್ಟು ಬಲಿಷ್ಠವಾಗಿದೆ. 2024ರ ಚಾಂಪಿಯನ್ ತಂಡದ 8 ಆಟಗಾರರು ಈಗಿನ ತಂಡದಲ್ಲೂ ಇದ್ದಾರೆ. ರೋಹಿತ್ ಶರ್ಮ-ವಿರಾಟ್ ಕೊಹ್ಲಿ ಅವರ ಅನುಭವವನ್ನು ಈ ಬಾರಿ ಮಿಸ್ ಮಾಡಿಕೊಂಡರೂ, ಅಭಿಷೇಕ್ ಶರ್ಮ-ಇಶಾನ್ ಕಿಶನ್ರ ಆಕ್ರಮಣಕಾರಿ ಮತ್ತು ತಿಲಕ್ ವರ್ಮ ಅವರ ಸಮಯೋಚಿತ ಆಟದ ಬಲವಿದೆ. ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ-ಅರ್ಷದೀಪ್ ಕಾಂಬಿನೇಷನ್ ಈ ಬಾರಿಯೂ ಮುಂದುವರಿದರೆ, ಸ್ಪಿನ್ ವಿಭಾಗದಲ್ಲಿ ಕುಲದೀಪ್-ಅಕ್ಷರ್ ಪಟೇಲ್ಗೆ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸಾಥ್ ನೀಡಲಿದ್ದಾರೆ. ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ-ಶಿವಂ ದುಬೆ ಮುಂದುವರಿಯಲಿದ್ದರೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಮೊಹಮದ್ ಸಿರಾಜ್ ಅವಕಾಶ ಸಿಕ್ಕರೆ ಬಾಚಿಕೊಳ್ಳುವ ಉತ್ಸಾಹದಲ್ಲಿದ್ದಾರೆ.