2003ರಲ್ಲಿ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಕೇವಲ ಪ್ರೇಕ್ಷಕರನ್ನು ಸೆಳೆಯಲು ಪರಿಚಯಿಸಲಾದ ಈ ಫಾರ್ಮ್ಯಾಟ್, ಇಂದು ಕ್ರೀಡಾ ಲೋಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ. ಈವರೆಗೆ ನಡೆದ ಕೂಟಗಳಲ್ಲಿ ಆರು ವಿಭಿನ್ನ ತಂಡಗಳು ಟ್ರೋಫಿ ಎತ್ತಿಹಿಡಿದಿವೆ. ಈ ಪೈಕಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಹಾಲಿ ಚಾಂಪಿಯನ್ ಭಾರತ ಮಾತ್ರ ತಲಾ ಎರಡು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಬರೆದಿವೆ.