ಟಿ20 ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಬಾಲ್ಯದ ಗೆಳತಿಯನ್ನು ವಿವಾಹವಾದ ಕುಲದೀಪ್​ ಯಾದವ್​

ಟಿ20 ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಬಾಲ್ಯದ ಗೆಳತಿಯೊಂದಿಗೆ ವಿವಾಹವಾದ ಕುಲದೀಪ್​ ಯಾದವ್​
ಟಿ20 ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಬಾಲ್ಯದ ಗೆಳತಿಯೊಂದಿಗೆ ವಿವಾಹವಾದ ಕುಲದೀಪ್​ ಯಾದವ್​
Published on
ಡೆಹ್ರಾಡೂನ್: ಸತತ 2ನೇ ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಭಾರತ ತಂಡದ ಸ್ಪಿನ್ನರ್​ ಕುಲದೀಪ್​ ಯಾದವ್ (kuldeep yadav)​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಶನಿವಾರ ಉತ್ತರಾಖಂಡದ ಮಸ್ಸೂರಿಯ ರೆಸಾರ್ಟ್​ನಲ್ಲಿ ಬಾಲ್ಯದ ಗೆಳತಿ ವಂಶಿಕಾ ಅವರನ್ನು ವರಿಸಿದರು.

ಶುಕ್ರವಾರ ಹಳದಿ ಮತ್ತು ಮೆಹಂದಿ ಸಮಾರಂಭ ನಡೆದಿತ್ತು. ಟೀಮ್​ ಇಂಡಿಯಾದ ಸಹ-ಆಟಗಾರರು ಮತ್ತು ಆಪ್ತರಾದ ಯಜುವೇಂದ್ರ ಚಾಹಲ್​, ರಿಂಕು ಸಿಂಗ್, ತಿಲಕ್​ ವರ್ಮ, ಭುವನೇಶ್ವರ್​ ಕುಮಾರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದರು.
ಮಾರ್ಚ್​ 17ರಂದು ಲಖನೌದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೂ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ಜೂನ್​ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.

ಕಳೆದ ವರ್ಷ ನವೆಂಬರ್​ನಲ್ಲೇ ಕುಲದೀಪ್​ ವಿವಾಹ ನಿಗದಿಯಾಗಿತ್ತು. ಆದರೆ ಕುಲದೀಪ್​ ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾಹವನ್ನು ಮುಂದೂಡಲಾಗಿತ್ತು. ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ ಏಕಮಾತ್ರ ಪಂದ್ಯದಲ್ಲಿ ಆಡಿದ್ದ ಕುಲದೀಪ್​ 14 ರನ್​ಗಳಿಗೆ 1 ವಿಕೆಟ್​ ಕಬಳಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net