ನಾವು ಭಾರತಕ್ಕೆ ಕಾಲಿಟ್ಟರೆ ನಮ್ಮನ್ನ ಸಾಯಿಸ್ತಾರೆ... ಬಾಂಗ್ಲಾದೇಶದಿಂದ ಮತ್ತೊಂದು ಕುತಂತ್ರ! T20 World Cup 2026

ಬಾಂಗ್ಲಾದೇಶ ತಂಡ
ಬಾಂಗ್ಲಾದೇಶ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್-2026 ಟೂರ್ನಮೆಂಟ್​ನಿಂದ ಹಿಂದೆ ಸರಿದಿರುವ ಬಾಂಗ್ಲಾದೇಶ
  • ಭಾರತದ ತೇಜೋವಧೆ ಮಾಡಲು ನಾನಾ ಕುತಂತ್ರಗಳನ್ನು ಮಾಡುತ್ತಿರುವ ಬಾಂಗ್ಲಾ
  • ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ದೇಶಕ ಅಮ್ಜದ್ ಹೊಸೈನ್ ನೀಡಿರುವ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ
T20 World Cup 2026 : ಟಿ20 ವಿಶ್ವಕಪ್-2026 ಟೂರ್ನಮೆಂಟ್​ನಿಂದ ಹಿಂದೆ ಸರಿದಿರುವ ಬಾಂಗ್ಲಾದೇಶ, ಭಾರತದ ವಿರುದ್ಧ ಇಲ್ಲಸಲ್ಲದ ಹೇಳಕೆಗಳನ್ನು ನೀಡುತ್ತಿದೆ. ಭಾರತದ ತೇಜೋವಧೆ ಮಾಡಲು ನಾನಾ ಕುತಂತ್ರಗಳನ್ನು ಮಾಡುತ್ತಿದೆ. ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ದೇಶಕ ಅಮ್ಜದ್ ಹೊಸೈನ್ ನೀಡಿರುವ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಟಿ20 ವಿಶ್ವಕಪ್​ನಿಂದ ಹಿಂದೆ ಸರಿಯುವುದು ನಮ್ಮ ಸರ್ಕಾರದ ನಿರ್ಧಾರ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮ್ಜದ್ ಹೊಸೈನ್, ಟಿ20 ವಿಶ್ವಕಪ್​ನಲ್ಲಿ ನಮ್ಮ ತಂಡ ಭಾಗವಹಿಸದೇ ಇರುವುದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತೆಗೆದುಕೊಂಡ ನಿರ್ಧಾರವಲ್ಲ, ಈ ನಿರ್ಧಾರ ಸರ್ಕಾರ ತೆಗೆದುಕೊಂಡ ನಿರ್ಧಾರವಾಗಿದೆ. ಎಲ್ಲ ಬಾಂಗ್ಲಾದೇಶಿ ಕ್ರಿಕೆಟಿಗರು ಟಿ20 ವಿಶ್ವಕಪ್ ಟೂರ್ನಮೆಂಟ್ ಆಡಲು ಬಯಸಿದ್ದರು ಆದರೆ, ಭಾರತಕ್ಕೆ ಭೇಟಿ ನೀಡಿದರೆ ನಮಗೆ ಜೀವ ಬೆದರಿಕೆ ಇರುವ ಕಾರಣ ನಮ್ಮ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅಮ್ಜದ್ ಹೊಸೈನ್ ಬಹಿರಂಗಪಡಿಸಿದ್ದಾರೆ. ಸದ್ಯ ಅಮ್ಜದ್ ಹೊಸೈನ್ ಅವರ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸುತ್ತಿದೆ.
ನಮ್ಮ ಕ್ರಿಕೆಟಿಗರು 2026ರ T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಕಾತುರದಿಂದ ಕಾಯುತ್ತಿದ್ದರು. ಇದರ ಭಾಗವಾಗಿ ತಂಡವನ್ನು ಸಹ ಘೋಷಿಸಲಾಗಿದೆ. ಆದರೆ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪರಿಸ್ಥಿತಿ ಪ್ರಸ್ತುತ ಸರಿ ಇಲ್ಲ. ಇಂತಹ ಸಂದರ್ಭದಲ್ಲಿ, ಭಾರತಕ್ಕೆ ಪ್ರವಾಸ ಮಾಡುವುದು ಸುರಕ್ಷಿತವಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಸಲಹೆ ನೀಡಿದೆ. ಭಾರತ ಪ್ರವಾಸಕ್ಕೆ ಖಂಡಿತವಾಗಿಯೂ ನಮ್ಮ ಸರ್ಕಾರದಿಂದ ಅನುಮತಿ ಅಗತ್ಯವಿದೆ. ಆದರೆ, ಬಾಂಗ್ಲಾದೇಶ ಸರ್ಕಾರದಿಂದ ಆ ಅನುಮತಿ ಬಂದಿಲ್ಲ ಎಂದು ಹೊಸೈನ್​ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಹೊಸೈನ್​ ಅವರು ಐಸಿಸಿಯನ್ನು ಟೀಕಿಸಿದ್ದಾರೆ. ಟಿ20 ವಿಶ್ವಕಪ್ 2026ರ ಪಂದ್ಯಾವಳಿಯ ಸಂದರ್ಭದಲ್ಲಿ ನಮ್ಮ ಕ್ರಿಕೆಟ್ ಮಂಡಳಿಯು ಅನೇಕ ಬೇಡಿಕೆಗಳನ್ನು ಮುಂದಿಟ್ಟಿತ್ತು. ಈ ಕುರಿತಾಗಿ ಐಸಿಸಿಗೆ ಪತ್ರ ಬರೆದಿದ್ದೆವು. ಆದರೆ, ಐಸಿಸಿ ತಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸಲಿಲ್ಲ. ನಮ್ಮ ಪಂದ್ಯದ ಸ್ಥಳಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಿದ್ದರೆ ಸಾಕಾಗಿತ್ತು. ಪಾಕಿಸ್ತಾನದಂತೆಯೇ ನಮ್ಮ ಪಂದ್ಯಗಳನ್ನು ನಡೆಸುವಂತೆ ನಾವು ಕೇಳಿದ್ದೆವು. ಆದರೆ, ಐಸಿಸಿ ಒಂದೇ ಒಂದು ಬೇಡಿಕೆಗೆ ಹಸಿರು ನಿಶಾನೆ ತೋರಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net