ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಯುಎಇ ಮತ್ತು ಕೆನಡಾ ಗ್ರೂಪ್ 'ಡಿ'ಯಲ್ಲಿವೆ. ದಕ್ಷಿಣ ಆಫ್ರಿಕಾ ಈಗಾಗಲೇ ಮೂರು ಪಂದ್ಯಗಳನ್ನು ಗೆದ್ದ ನಂತರ ಸೂಪರ್-8ಗೆ ಅರ್ಹತೆ ಪಡೆದಿದೆ. ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಉಳಿದ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಆದಾಗ್ಯೂ, ಕಿವೀಸ್ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಆದರೆ, ಅಫ್ಘಾನಿಸ್ತಾನ ಮೂರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ದಾಖಲಿಸಿದೆ. ಕಿವೀಸ್ ತನ್ನ ಕೊನೆಯ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆದ್ದರೆ, ನ್ಯೂಜಿಲೆಂಡ್ ಸೂಪರ್-8ಗೆ ಅರ್ಹತೆ ಪಡೆಯಲಿದೆ,(ಏಜೆನ್ಸೀಸ್).