2026 T20 World Cup: ಸುಲಭ ಗುಂಪಿನಲ್ಲಿ ಭಾರತ, ಪಾಕಿಸ್ತಾನ ತಂಡಗಳು!​

2026 T20 World Cup: ಸುಲಭ ಗುಂಪಿನಲ್ಲಿ ಭಾರತ, ಪಾಕಿಸ್ತಾನ ತಂಡಗಳು!​
2026 T20 World Cup: ಸುಲಭ ಗುಂಪಿನಲ್ಲಿ ಭಾರತ, ಪಾಕಿಸ್ತಾನ ತಂಡಗಳು!​
Published on
ನವದೆಹಲಿ: ಭಾರತ-ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಮುಂದಿನ ವರ್ಷದ ಟಿ20 ವಿಶ್ವಕಪ್​ ಟೂರ್ನಿಯ ಸಂಭಾವ್ಯ ಗುಂಪುಗಳ ವಿವರ ಬಹಿರಂಗಗೊಂಡಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದರೂ, ಇದೊಂದು ಸುಲಭ ಗುಂಪು ಆಗಿದೆ.

ಟೆಸ್ಟ್​ ಮಾನ್ಯತೆ ಇಲ್ಲದ ನೆದರ್ಲೆಂಡ್​, ನಮೀಬಿಯಾ, ಅಮೆರಿಕ ಗುಂಪಿನಲ್ಲಿರುವ ಇತರ 3 ತಂಡಗಳಾಗಿವೆ. ಇದರಿಂದ ಭಾರತ-ಪಾಕ್​ ನಡುವಿನ ಪಂದ್ಯದ ಲಿತಾಂಶ ಏನೇ ಬಂದರೂ, ಉಭಯ ತಂಡಗಳು ಸೂಪರ್​-8 ಹಂತಕ್ಕೇರುವ ಹಾದಿ ಸುಲಭವಿದೆ. ಆದರೆ ಕಳೆದ ಆವೃತ್ತಿಯಲ್ಲಿ ಪಾಕ್​, ಅಮೆರಿಕ ವಿರುದ್ಧ ಆಘಾತ ಎದುರಿಸಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು ಎಂಬುದು ಕೂಡ ಗಮನಾರ್ಹವೆನಿಸಿದೆ.

ಟೂರ್ನಿಯಲ್ಲಿ ಆಡುವ 20 ತಂಡಗಳನ್ನು ತಲಾ 5ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್​-8 ಹಂತಕ್ಕೇರಲಿವೆ. ಇಲ್ಲಿಂದ ಅಗ್ರ 4 ತಂಡಗಳು ಸೆಮಿಫೈನಲ್​ಗೇರಲಿವೆ.

ಸಹ-ಆತಿಥೇಯ ಶ್ರೀಲಂಕಾ ತಂಡ ಗ್ರೂಪ್​ ಆಫ್​​ ಡೆತ್​ ಎನಿಸುವಂಥ ಗುಂಪಿನಲ್ಲಿದ್ದು, ಮಾಜಿ ಚಾಂಪಿಯನ್​ ಆಸ್ಟ್ರೆಲಿಯಾ ಜತೆಗೆ ಟೆಸ್ಟ್​ ಮಾನ್ಯತೆಯ ಜಿಂಬಾಬ್ವೆ, ಐರ್ಲೆಂಡ್​ ಮತ್ತು ಓಮನ್​ ಗುಂಪಿನ ಇತರ ತಂಡಗಳಾಗಿವೆ. 2026ರ ಫೆಬ್ರವರಿ 7ರಿಂದ ಮಾರ್ಚ್​ 8ರವರೆಗೆ ನಡೆಯಲಿರುವ ಟೂರ್ನಿಯ ಡ್ರಾ ವಿವರವನ್ನು ಐಸಿಸಿ ನವೆಂಬರ್​ 25ರಂದು ಮುಂಬೈನಲ್ಲಿ ಅಧಿಕೃತವಾಗಿ ಪ್ರಕಟಿಸಲಿದೆ.
ಸಂಭಾವ್ಯ ಗುಂಪುಗಳು:
1: ಭಾರತ (1ನೇ ರ್ಯಾಂಕ್​), ಪಾಕಿಸ್ತಾನ (7), ನೆದರ್ಲೆಂಡ್​ (13), ನಮೀಬಿಯಾ (15), ಅಮೆರಿಕ (18).
2: ಆಸ್ಟ್ರೆಲಿಯಾ (2), ಶ್ರೀಲಂಕಾ (8), ಜಿಂಬಾಬ್ವೆ (11), ಐರ್ಲೆಂಡ್​ (12), ಓಮನ್​ (20).
3: ಇಂಗ್ಲೆಂಡ್​ (3), ವೆಸ್ಟ್​ ಇಂಡೀಸ್​ (6), ಬಾಂಗ್ಲಾದೇಶ (9), ನೇಪಾಳ (17), ಇಟಲಿ (28).
4: ನ್ಯೂಜಿಲೆಂಡ್​ (4), ದಕ್ಷಿಣ ಆಫ್ರಿಕಾ (5), ಅಫ್ಘಾನಿಸ್ತಾನ (10), ಯುಎಇ (16), ಕೆನಡಾ (18).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net