ಟಿ20 ವಿಶ್ವಕಪ್​ ಆರಂಭಕ್ಕೂ ಮನ್ನವೇ ಟೀಮ್​ ಇಂಡಿಯಾಗೆ ಶಾಕ್​: ಗಾಯಗೊಂಡ ಸ್ಟಾರ್​ ಆಟಗಾರ! Team India

ಟಿ20 ವಿಶ್ವಕಪ್​ ಆರಂಭಕ್ಕೂ ಮನ್ನವೇ ಗಾಯಗೊಂಡ ಸ್ಟಾರ್​ ಆಟಗಾರ
ಟಿ20 ವಿಶ್ವಕಪ್​ ಆರಂಭಕ್ಕೂ ಮನ್ನವೇ ಗಾಯಗೊಂಡ ಸ್ಟಾರ್​ ಆಟಗಾರ
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್​ ಪ್ರೇಮಿಗಳು ಎದುರು ನೋಡುತ್ತಿರುವ ಟಿ20 ವಿಶ್ವಕಪ್​ ಮೆಗಾ ಟೂರ್ನಿಗೆ ಕ್ಷಣಗಣನೆ
  • ಇನ್ನು ಎರಡೇ ದಿನದಲ್ಲಿ ಆರಂಭವಾಗಲಿದೆ ಪ್ರತಿಷ್ಠೆಯ ಕದನ
  • ಟೂರ್ನಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ
Team India : ಕ್ರಿಕೆಟ್​ ಪ್ರೇಮಿಗಳು ಎದುರು ನೋಡುತ್ತಿರುವ ಟಿ20 ವಿಶ್ವಕಪ್​ ಮೆಗಾ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಎರಡೇ ದಿನದಲ್ಲಿ ಪ್ರತಿಷ್ಠೆಯ ಕದನ ಆರಂಭವಾಗಲಿದೆ. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಬುಧವಾರ (ಫೆ.04) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಟಾರ್ ವೇಗಿ ಹರ್ಷಿತ್ ರಾಣಾ ಗಾಯಗೊಂಡಿದ್ದಾರೆ. ಈ ಪಂದ್ಯದಲ್ಲಿ ರಾಣಾ ಅವರು ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿ, 16 ರನ್‌ಗಳನ್ನು ಬಿಟ್ಟುಕೊಟ್ಟರು.
ಭಾರತ ನೀಡಿದ 241 ರನ್​ಗಳ ಬೃಹತ್​ ಗುರಿಯನ್ನು ದಕ್ಷಿಣ ಆಫ್ರಿಕಾ ಬೆನ್ನಟ್ಟುವಾಗ ಹರ್ಷಿತ್​ ರಾಣಾ ಅವರು 5ನೇ ಓವರ್​ ಎಸೆದರು. ಇದು ಅವರ ಮೊದಲನೇ ಓವರ್​ ಆಗಿತ್ತು. ಬೌಲಿಂಗ್ ಮಾಡುವಾಗ, ಓಡಲು ಸ್ವಲ್ಪ ತೊಂದರೆ ಅನುಭವಿಸಿದರು. ಈ ಓವರ್‌ನಲ್ಲಿ ಎರಡು ಬಾರಿ ಈ ರೀತಿಯ ತೊಂದರೆ ಎದುರಾಯಿತು. ಕೊನೆಗೆ, ಹೇಗೋ ಓವರ್ ಪೂರ್ಣಗೊಳಿಸಿದರು. ಇದಾದ ನಂತರ ಹರ್ಷಿತ್​ ರಾಣಾ ಅವರ ಮೊಣಕಾಲು ಹಿಡಿದುಕೊಂಡಿರುವುದು ಕಂಡುಬಂದಿತು. ನೋವು ತೀವ್ರವಾಗಿದ್ದರಿಂದ, ಅವರು ಮತ್ತೊಂದು ಓವರ್ ಬೌಲ್ ಮಾಡದೆ ಮೈದಾನದಿಂದ ಹೊರಟುಹೋದರು.
ಆ ಕ್ಷಣದಿಂದ ಹರ್ಷಿತ್​ ರಾಣಾ ಅವರು ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಅವರ ಗಾಯದ ಬಗ್ಗೆ ಬಿಸಿಸಿಐ ಇಲ್ಲಿಯವರೆಗೆ ಯಾವುದೇ ಅಪ್​ಡೇಟ್​ ನೀಡಿಲ್ಲ. ಒಂದು ವೇಳೆ ಅವರ ಗಾಯ ಗಂಭೀರ ಸ್ವರೂಪವಾಗಿದ್ದರೆ ಮತ್ತು ವಿಶ್ವಕಪ್ ಅನ್ನು ತಪ್ಪಿಸಿಕೊಂಡರೆ, ಅದು ಭಾರತೀಯ ತಂಡಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಏಕೆಂದರೆ, ಹರ್ಷಿತ್​ ರಾಣಾ ಅವರು ಕೇವಲ ವೇಗದ ಬೌಲಿಂಗ್ ಮಾಡುವುದಲ್ಲದೆ ಮಧ್ಯಮ ವೇಗದಲ್ಲಿ ರನ್ ಸಹ ಗಳಿಸಬಲ್ಲರು. ಅವರೊಬ್ಬ ಉತ್ತಮ ಆಲ್​ರೌಂಡರ್​ ಆಟಗಾರ.
ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದರು. ವಾಸಿ, ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದಾರೆ. ಇದರ ಪರಿಣಾಮವಾಗಿ, ಕಿವೀಸ್ ವಿರುದ್ಧದ ಉಳಿದ ಏಕದಿನ ಮತ್ತು ಟಿ20 ಸರಣಿಯಿಂದ ಅವರನ್ನು ಹೊರಗಿಡಲಾಯಿತು. ಅವರಿನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ತೋರುತ್ತದೆ. ಪ್ರಸ್ತುತ ವಾಸಿ, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿದ್ದಾರೆ. ಅವರ ಸ್ಥಾನಕ್ಕೆ ಇನ್ನೂ ಯಾರನ್ನೂ ಹೆಸರಿಸಿಲ್ಲ.
ಅಂದಹಾಗೆ, ಫೆಬ್ರವರಿ 7 ರಂದು ಭಾರತ T20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಗ್ರೂಪ್​ ಹಂತದ ಪಂದ್ಯಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸೂಪರ್-8 ರ ಹೊತ್ತಿಗೆ ವಾಸಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net