ಜಿಂಬಾಬ್ವೆ ವಿರುದ್ಧ ಚುಟುಕು ಸರಣಿ ಕ್ಲೀನ್‌ಸ್ವೀಪ್: ಆರ್​ಸಿಬಿ ವೇಗಿ ಭುವೇಶ್ವರ್ ದಾಖಲೆ ಸರಿಗಟ್ಟಿದ ಮಯಾಂಕ್​ ಯಾದವ್:

ಜಿಂಬಾಬ್ವೆ ವಿರುದ್ಧ ಚುಟುಕು ಸರಣಿ ಕ್ಲೀನ್‌ಸ್ವೀಪ್: ಆರ್​ಸಿಬಿ ವೇಗಿ ಭುವೇಶ್ವರ್ ದಾಖಲೆ ಸರಿಗಟ್ಟಿದ ಮಯಾಂಕ್​ ಯಾದವ್:
ಜಿಂಬಾಬ್ವೆ ವಿರುದ್ಧ ಚುಟುಕು ಸರಣಿ ಕ್ಲೀನ್‌ಸ್ವೀಪ್: ಆರ್​ಸಿಬಿ ವೇಗಿ ಭುವೇಶ್ವರ್ ದಾಖಲೆ ಸರಿಗಟ್ಟಿದ ಮಯಾಂಕ್​ ಯಾದವ್:
Published on
ಹರಾರೆ: ಯುಕೆ ಪ್ರವಾಸದ ಸತತ ಎರಡು ಟಿ20 ಸರಣಿ ಸೋಲಿನ ನಂತರ ಜಯದ ಹಾದಿಗೆ ಮರಳಿರುವ ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಜಿಂಬಾಬ್ವೆ ವಿರುದ್ಧ ಚುಟುಕು ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿ (81 ರನ್, 49 ಎಸೆತ, 8 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೇಯಸ್ ಅಯ್ಯರ್ ಪಡೆ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 35 ರನ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಭಾರತ ವಶಪಡಿಸಿಕೊಂಡಿತು.
ಭಾರತ: 5 ವಿಕೆಟ್‌ಗೆ 192 (ವೈಭವ್ ಸೂರ್ಯವಂಶಿ 81, ಅಭಿಷೇಕ್ ಶರ್ಮ 2, ಇಶಾನ್ ಕಿಶನ್ 29, ಶ್ರೇಯಸ್ ಅಯ್ಯರ್ 27, ತಿಲಕ್ ವರ್ಮ 11*, ರಿಂಕು ಸಿಂಗ್ 25, ಬ್ರಾಡ್ ಇವಾನ್ಸ್ 41ಕ್ಕೆ 2, ಮುಜರಬಾನಿ 33ಕ್ಕೆ 1, ಮಾಧವೀರೆ 37ಕ್ಕೆ 1).
ಜಿಂಬಾಬ್ವೆ: 7 ವಿಕೆಟ್‌ಗೆ 157 (ಬೆನೆಟ್ 0, ಬೆನ್ ಕರ‌್ರನ್ 20, ಡಿಯೋನ್ ಮೆಯರ್ಸ್‌ 19, ಸಿಕಂದರ್ 0, ರ‌್ಯಾನ್ ಬರ್ಲ್ 54*, ಮಾಧವೀರೆ 28, ಮಯಾಂಕ್ 29ಕ್ಕೆ 3, ಯಶ್ ಠಾಕೂರ್ 45ಕ್ಕೆ 2, ರವಿ ಬಿಷ್ಣೋಯಿ 24ಕ್ಕೆ 1).
3. ಮಯಾಂಕ್ ಯಾದವ್ ಅಂತಾರಾಷ್ಟ್ರೀಯ ಟಿ20 ಇನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೂರನೇ ದೃಷ್ಟಾಂತ ಇದಾಗಿದೆ. ಇದರೊಂದಿಗೆ ಭಾರತ ಪರ ಗರಿಷ್ಠ ಬಾರಿ ಈ ಸಾಧನೆ ಮಾಡಿದ ಭುವನೇಶ್ವರ್ ದಾಖಲೆ ಸರಿಗಟ್ಟಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net