ಮುಂಬೈ: 2026ರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಬೆನ್ನಲ್ಲೇ, ಭಾರತ ತಂಡದ ನಾಯಕ (Suryakumar Yadav) ಸೂರ್ಯಕುಮಾರ್ ಯಾದವ್, ತಮ್ಮ ಸಂಭ್ರಮಕ್ಕೆ ವೈಯಕ್ತಿಕ ಸ್ಪರ್ಶ ನೀಡಿದ್ದಾರೆ. 2024ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತಮ್ಮ ಪತ್ನಿ ದೇವಿಶಾ ಶೆಟ್ಟಿ ಜೊತೆಗಿನ ಅತ್ಯಂತ ಜನಪ್ರಿಯ ಫೋಟೋವನ್ನು ಅವರು ಈಗ ಮತ್ತೆ ಮರುಸೃಷ್ಟಿಸಿದ್ದು, ಸಧ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.