ವಿಕೆಟ್ ಕೀಪರ್. ಬ್ಯಾಟ್ಸ್ಮನ್ ಇಶಾನ್ ಕಿಶನ್, ಮೊದಲ ಕಮ್ಬ್ಯಾಕ್ನಲ್ಲಿ ವಿಫಲಗೊಂಡಿದ್ದೇ ಆದರೂ ಎರಡನೇ ಟಿ20 ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ನೀಡಿದರು. ಕೇವಲ 32 ಎಸೆತದಲ್ಲಿ 76 ರನ್ ಸಿಡಿಸಿದ ಕಿಶನ್, 11 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದರು. ಈ ಸಮಯದಲ್ಲಿ ಕಿಶನ್ಗೆ ಸಾಥ್ ನೀಡಿದ ನಾಯಕ ಸೂರ್ಯ, 37 ಎಸೆತದಲ್ಲಿ ಅಜೇಯ 82 ರನ್ ಗಳಿಸಿದರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.