ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ಸೂರ್ಯಕುಮಾರ್, ಮೇ 4ರ ಲಖನೌ ವಿರುದ್ಧದ ಐಪಿಎಲ್ ಪಂದ್ಯದ ನಂತರ ಮುಂಬೈ ತಂಡವನ್ನು ತೊರೆದಿದ್ದರು. ಮೇ 10ಕ್ಕೆ ನಿಗದಿಯಾಗಿರುವ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ತಡವಾಗಿ ತಂಡ ಕೂಡಿಕೊಳ್ಳುವ ಸಾಧ್ಯತೆಗಳಿವೆ. ಕಳೆದ ಮಾರ್ಚ್ 8ರಂದು ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕನಾಗಿರುವ 35 ವರ್ಷದ ಸೂರ್ಯ, ಐತಿಹಾಸಿಕ ಸಾಧನೆ ಮಾಡಿದ ಎರಡು ತಿಂಗಳ ಅಂತರದಲ್ಲಿ ಅಪ್ಪನಾದ ಖುಷಿಯಲ್ಲಿದ್ದಾರೆ. ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಮೂಲತ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾಗಿದ್ದು, 2016ರಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.