ಪಾಕ್ ವಿರುದ್ಧ ಭಾರತಕ್ಕೆ ಜಯಭೇರಿ: ಗೆಲುವಿನ ಬೆನ್ನಲ್ಲೇ ಸೂರ್ಯಕುಮಾರ್ ಮಾಡಿದ 'ಮೂರು ಪದಗಳ' ಟ್ವೀಟ್ ವೈರಲ್! Surya kumar Yadav

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ (ಚಿತ್ರ Instagram)
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ (ಫೆ.15) ನಡೆದ ಹೈವೋಲ್ಟೇಜ್ ಪಂದ್ಯ
  • ಭಾರತ ತಂಡ ಪಾಕಿಸ್ತಾನವನ್ನು 61 ರನ್​ಗಳಿಂದ ಬಗ್ಗು ಬಡಿಯುವ ಮೂಲಕ 3ನೇ ಜಯ ಸಾಧಿಸಿದೆ
  • ಗೆಲುವಿನ ಬೆನ್ನಲ್ಲೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್
ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ (ಫೆ.15) ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 61 ರನ್​ಗಳಿಂದ ಬಗ್ಗು ಬಡಿಯುವ ಮೂಲಕ 2026ರ ಟಿ20 ವಿಶ್ವಕಪ್‌ನಲ್ಲಿ ಸತತವಾಗಿ (Surya kumar Yadav) 3ನೇ ಜಯ ಸಾಧಿಸಿದೆ.
ಗೆಲುವಿನ ಬೆನ್ನಲ್ಲೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.

ಪೋಸ್ಟ್​ನಲ್ಲೇನಿದೆ?

ನಾಯಕತ್ವ ವಹಿಸಿಕೊಂಡ ಬಳಿಕ ಸತತ 4 ನೇ ಬಾರಿ ಬದ್ಧ ವೈರಿಗಳ ಸೊಕ್ಕಡಗಿಸಿರುವ ಸೂರ್ಯ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ನಾಲ್ಕು ಪೋಟೋಗಳನ್ನು ಹಂಚಿಕೊಂಡು 'ಹರ್ ಹರ್ ಮಹಾದೇವ್' ಎಂಬ ಶೀರ್ಷಿಕೆ ನೀಡಿದ್ದಾರೆ. ನಿನ್ನೆ ಇಡೀ ದೇಶವೇ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದು, ಈ ಗೆಲುವನ್ನು ಸಾಕ್ಷಾತ್ ಶಿವನಿಗೆ ಅರ್ಪಿಸಿದಂತಾಗಿದೆ.
ಪಂದ್ಯ ಮುಗಿದ ಬೆನ್ನಲ್ಲೇ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸಹ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಏನಾದರೂ ಸಂದೇಹಗಳಿವೆಯಾ? ಮಹಾ ಶಿವರಾತ್ರಿಯ ಮುನ್ನಾ ದಿನದಂದು ಈ ವಿಜಯವನ್ನು ಎಲ್ಲಾ ಭಾರತೀಯರಿಗೆ ಅರ್ಪಿಸುತ್ತೇನೆ!! ಹರ್ ಹರ್ ಮಹಾದೇವ್! ಎಂದು ಬರೆದುಕೊಂಡಿದ್ದಾರೆ.
ಟಾಸ್​ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.
ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ಇಶಾನ್​ ಕಿಶನ್​ ಸ್ಪೋಟಕ ಬ್ಯಾಟಿಂಗ್​ ಮೂಲಕ ಕೇವಲ 40 ಎಸೆತಗಳಲ್ಲಿ 77 ರಸ್​ ಗಳಿಸಿ ಪಾಕ್​ ಬೌಲರ್ಸ್​ಗಳ ಬೆವರಿಳಿಸಿದರು.
ಒಂದು ಬದಿಯಲ್ಲಿ ಭಾರತದ ಆಟಗಾರರು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರುತ್ತಿದ್ದರೆˌ ಇನ್ನೊಂದು ಬದಿಯಲ್ಲಿ ಕಿಶನ್ ರನ್ ಮಳೆ ಹರಿಸಿದರು.
ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿನಿಂದ ಭಾರತ ತಂಡವು 2026 ರ ಟಿ20 ವಿಶ್ವಕಪ್‌ನ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದ ಎ ಗುಂಪಿನ ಮೊದಲ ತಂಡವಾಯಿತು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net