ಈ ವರ್ಷ ಆರ್​ಸಿಬಿ ಕೈಯಲ್ಲಿ... ರಜತ್​ ಪಾಟೀದಾರ್​ ಪಡೆ ಬಗ್ಗೆ ಸುರೇಶ್​ ರೈನಾ ಓಪನ್ ಟಾಕ್​ | IPL 2026

ಸಿಎಸ್​ಕೆ ಮಾಜಿ ಆಟಗಾರ ಸುರೇಶ್ ರೈನಾ
ಸಿಎಸ್​ಕೆ ಮಾಜಿ ಆಟಗಾರ ಸುರೇಶ್ ರೈನಾ
Published on

ಪ್ರಮುಖ ಮುಖ್ಯಾಂಶಗಳು

  • ಮುಗಿದ ಐಪಿಎಲ್​ 19ನೇ ಆವೃತ್ತಿಯ ಮೊದಲಾರ್ಧ
  • ಐಪಿಎಲ್​ ಟ್ರೋಫಿ ಎತ್ತಿಹಿಡಿಯಲು ಟಾಪ್​ 4ರಲ್ಲಿ ಬಲಿಷ್ಠ ತಂಡಗಳು
  • ಈ 2 ತಂಡಗಳು 2026ರ ಟ್ರೋಫಿ ಗೆಲ್ಲುವ ಚಾನ್ಸ್​ ಇದೆ ಎಂದ ರೈನಾ
IPL 2026 Title: ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನ ಫಸ್ಟ್​ ಆಫ್​ ಮುಕ್ತಾಯಗೊಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳಿಗೆ 10 ತಂಡಗಳ ಪೈಪೋಟಿಯ ಚಿತ್ರಣ ಅದಾಗಲೇ ಲಭಿಸಿದೆ. ಸನ್​ರೈಸರ್ಸ್​ ಹೈದರಾಬಾದ್​, ರಾಯಲ್​ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಟಾಪ್​ 4 ರಲ್ಲಿವೆ. ಇದರೊಟ್ಟಿಗೆ, ಗುಜರಾತ್​ ಟೈಟನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳು ಪ್ಲೇಆಫ್​ ರೇಸ್​ಗೆ ಲಗ್ಗೆಯಿಡಲು ಜಿದ್ದಾಜಿದ್ದಿ ನಡೆಸುತ್ತಿವೆ.
ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಪ್ರಸ್ತುತ ನಡೆಯುತ್ತಿರುವ ಐಪಿಎಲ್​ 2026ರ ಆವೃತ್ತಿಯಲ್ಲಿ ಯಾವ ತಂಡಗಳು ಟ್ರೋಫಿ ಎತ್ತಿಹಿಡಿಯಲು ಯೋಗ್ಯ ಎಂಬುದರ ಕುರಿತು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜಿಯೋ ಹಾಟ್​ಸ್ಟಾರ್​ನಲ್ಲಿ ಮಾತನಾಡಿದ ಅವರು, ಈ ವರ್ಷವು ಆರ್​ಸಿಬಿಯೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿ ಎಂದರು.
ಕಳೆದ ವರ್ಷ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದ ಆರ್‌ಸಿಬಿಗೆ 19ನೇ ಆವೃತ್ತಿಯಲ್ಲಿ ಇನ್ನಷ್ಟು ಬಲ ತುಂಬಿದೆ. ಈ ವರ್ಷದಲ್ಲಿ ಮೊದಲ ಪಂದ್ಯದಿಂದ ಅತ್ಯುತ್ತಮ ಹಾಗೂ ಗಮನ ಸೆಳೆಯುವಂತ ಕ್ರಿಕೆಟ್​ ಅನ್ನು ಆರ್​ಸಿಬಿ ಆಡುತ್ತಿದೆ. 9 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ ಪಾಯಿಂಟ್​ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಪಡೆಗೆ 2026ರ ಟ್ರೋಫಿ ಗೆಲ್ಲಲು ಒಳ್ಳೆಯ ಅವಕಾಶವಿದೆ. ಬ್ಯಾಟಿಂಗ್, ಬೌಲಿಂಗ್​ ಮತ್ತು ಉತ್ತಮ ಆಲ್​ರೌಂಡ್​ ಆಟವನ್ನು ಆರ್​ಸಿಬಿ ಕಾಪಾಡಿಕೊಂಡು ಬಂದಿದೆ. ಜೊತೆಗೆ ರಜತ್ ಪಾಟಿದಾರ್ ಅವರ ನಾಯಕತ್ವ ಉತ್ತಮವಾಗಿದೆ ಎಂದರು.
ಆರ್‌ಸಿಬಿ ಆಡುವ ಪ್ರತಿ ಪಂದ್ಯವನ್ನು ನೋಡಿದರೆ, ಅವರ ಬೌಲಿಂಗ್ ಯೂನಿಟ್ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಇದು ಕೇವಲ 240 ಅಥವಾ 250 ರನ್​ಗಳ ಬೃಹತ್​ ಸ್ಕೋರ್​ ಗಳಿಸುವುದರ ಬಗ್ಗೆ ಮಾತ್ರವಲ್ಲ, ಬ್ಯಾಟಿಂಗ್​ ಮಾಡುವ ಪ್ರತಿಯೊಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ನನಗೆ ಆರ್​ಸಿಬಿ ಟ್ರೋಫಿಯನ್ನು ಗೆಲ್ಲುವ ಎಲ್ಲ ಅರ್ಹತೆ ಮತ್ತು ಸಾಧ್ಯತೆಗಳಿವೆ ಎಂದು ಅನಿಸುತ್ತದೆ ಎಂದರು.
ಇನ್ನೊಂದು ತಂಡ ರಾಜಸ್ಥಾನ್ ರಾಯಲ್ಸ್ (RR). ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಆವೃತ್ತಿಯನ್ನು ಗೆಲ್ಲುವ ಉತ್ತಮ ಅವಕಾಶ ರಿಯಾನ್​ ಪರಾಗ್​ ಪಡೆಗೂ ಇದೆ. ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್​, ಪರಾಗ್ ಅವರಂತಹ ಯುವ ಪ್ರತಿಭೆಗಳು ಮತ್ತು ಜೋಫ್ರಾ ಆರ್ಚರ್, ರವಿ ಬಿಷ್ಣೋಯ್ ಅವರ ಅತ್ಯುತ್ತಮ ಪ್ರದರ್ಶನ ತಂಡದ ಬಲಿಷ್ಠತೆಯನ್ನು ತೋರಿಸಿದೆ. ಹೀಗಾಗಿ, 18 ವರ್ಷಗಳ ಬಳಿಕ ತಮ್ಮ ಎರಡನೇ ಪ್ರಶಸ್ತಿ ಗೆಲ್ಲಲು ಆರ್​ಆರ್​ಗೆ ಚಾನ್ಸ್​ ಇದೆ ಎಂದು ರೈನಾ ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net