ಸನ್‌ರೈಸರ್ಸ್ ಹೈದರಾಬಾದ್‌ಗೆ ಭಾರಿ ಹಿನ್ನಡೆ: ಜ್ಯಾಕ್ ಎಡ್ವರ್ಡ್ಸ್ ಸ್ಥಾನ ತುಂಬುವವರು ಯಾರು? IPL 2026

(ಚಿತ್ರ X)
(ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ ಆರಂಭಕ್ಕೂ ಮುನ್ನವೇ ಪಂದ್ಯದಿಂದ ಹೊರಬಂದ 3 ಕೋಟಿಯ ಆಲ್‌ರೌಂಡರ್!
  • ತಂಡ ಭಾರೀ ಭರವಸೆಯೊಂದಿಗೆ ಹರಾಜಿನಲ್ಲಿ ಖರೀಸಿದಿಸಿದ್ದ ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್
  • ಆಸ್ಟ್ರೇಲಿಯಾ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಟಿ20ಐ ಪಂದ್ಯವನ್ನು ಆಡಿದ್ದರು
IPL 2026: ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡ ಭಾರೀ ಭರವಸೆಯೊಂದಿಗೆ ಹರಾಜಿನಲ್ಲಿ ಖರೀಸಿದಿಸಿದ್ದ  ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಅವರು ಗಾಯಗೊಂಡ ಹಿನ್ನಲೆ ಪಂದ್ಯದಿಂದ ಅಧೀಕೃತವಾಗಿ ಹೊರಗುಳಿದಿದ್ದಾರೆ. 
ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಟಿ20ಐ ಪಂದ್ಯವನ್ನು ಆಡಿದ್ದರು. ಇವರ ಆಟದ ಶೈಲಿಯನ್ನು ನೋಡಿದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಮೆಚ್ಚಿಕೊಂಡರು. ಇದರ ಪರಿಣಾಮವಾಗಿ ಹೈದರಾಬಾದ್ ತಂಡವು ಹರಾಜಿನಲ್ಲಿ INR 3 ಕೋಟಿಗೆ ಖರೀದಿಸಿತು.
ಏತನ್ಮಧ್ಯೆ, ಜ್ಯಾಕ್ ತಮ್ಮ ವೃತ್ತಿಜೀವನದಲ್ಲಿ 77 ಟಿ20 ಪಂದ್ಯಗಳನ್ನು ಆಡಿದ್ದು, 121.50 ಸ್ಟ್ರೈಕ್ ರೇಟ್‌ನಲ್ಲಿ 853 ರನ್ ಗಳಿಸಿದ್ದಾರೆ. 8.32 ಎಕಾನಮಿ ರೇಟ್‌ನಲ್ಲಿ 52 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಹೈದರಾಬಾದ್ ಶಿಬಿರದಲ್ಲಿ ಗಾಯಗೊಂಡ ಎರಡನೇ ಕ್ರಿಕೆಟಿಗ ಎಡ್ವರ್ಡ್ಸ್. ತಂಡದ ನಾಯಕ ಕಮ್ಮಿನ್ಸ್ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಈ ಸೀಸನ್​ನ ಮೊದಲ ಕೆಲವು ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಇಶಾನ್​ ಕಿಶನ್ ತಂಡವನ್ನು ಮುನ್ನಡೆಸಲಿದ್ದು, ಅಭಿಷೇಕ್ ಶರ್ಮಾ ಅವರನ್ನು ಉಪನಾಯಕರನ್ನಾಗಿ ಘೋಷಿಸಲಾಗಿದೆ.
ಐಪಿಎಲ್ 2026 ರಿಂದ ಬಹು ವೇಗಿಗಳನ್ನು ಕೈಬಿಡಲಾಗಿದೆ.
ಮಾರ್ಚ್ 19 ರಂದು ಮೂವರು ಕ್ರಿಕೆಟಿಗರು ಐಪಿಎಲ್ 2026 ರಿಂದ ಹಿಂದೆ ಸರಿದರು. ಈ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಥನ್ ಎಲ್ಲಿಸ್, ರಾಜಸ್ಥಾನ್​ ರಾಯಲ್ಸ್​ನ ಸ್ಯಾಮ್ ಕರನ್ ಮತ್ತು ಪಂಜಾಬ್ ಕಿಂಗ್ಸ್​ನ ಲಾಕಿ ಫರ್ಗುಸನ್ ಟೂರ್ನಿಯ ಗಮನಾರ್ಹ ಭಾಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ದೃಢಪಡಿಸಿದ್ದಾರೆ. 
ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ನಾಥನ್ ಎಲ್ಲಿಸ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುತ್ತಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ತಂಡವು ಬದಲಿ ಆಟಗಾರನ ಹುಡುಕಾಟದಲ್ಲಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net