CSK ಯಲ್ಲಿ ಬದಲಾವಣೆ ಬಿರುಗಾಳಿ: ಆಟಗಾರನಾಗಿ ಧೋನಿ ಮುಂದುವರಿಯುವುದು ಡೌಟ್! ಕೋಚ್ ಹುದ್ದೆಗೇರಲು ಸಜ್ಜಾದ ಕ್ಯಾಪ್ಟನ್ ಕೂಲ್? MS Dhoni as CSK Coach
ಮುಂದಿನ ಐಪಿಎಲ್ನಲ್ಲಿ 'ಕ್ಯಾಪ್ಟನ್ ಕೂಲ್' ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
CSK ಯಲ್ಲಿ ದೊಡ್ಡ ಬದಲಾವಣೆಗಳ ಸುಳಿವು! ಆ
ಆಟಗಾರನಾಗಿ ಎಂ.ಎಸ್. ಧೋನಿ ಮುಂದುವರಿಯುವುದು ಅನುಮಾನ
ಮುಂದಿನ ಐಪಿಎಲ್ನಲ್ಲಿ 'ಕ್ಯಾಪ್ಟನ್ ಕೂಲ್' ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ
ಚೆನ್ನೈ: ಮುಂಬರುವ ಐಪಿಎಲ್ನಲ್ಲಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ಮುಂದಾಗಿದ್ದು, ಐಪಿಎಲ್ ಪ್ರಾರಂಭದಿಂದ ತಂಡದ ಜೊತೆಗೆ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ (MS Dhoni as CSK Coach) ಅವರನ್ನು ತಂಡದ ಕೋಚ್ ಆಗಿ ನೇಮಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಒಂದಾಗಿದ್ದು, ಇಲ್ಲಿವರೆಗೆ ಭರ್ತಿ ಐದು ಬಾರಿ ಟ್ರೋಫಿಯನ್ನು ಮೇಲೆತ್ತುವ ಮೂಲಕ, ತಾವೊಂದು ಚಾಂಪಿಯನ್ ತಂಡವೆಂದು ಸಾಬೀತು ಪಡಿಸಿದೆ.
ಆದರೆ ಇತ್ತೀಚಿನ ಸೀಸನ್ಗಳಲ್ಲಿ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು, ಇದು ಚೆನ್ನೈ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ತಂಡದ ಆಟಗಾರರ ಹಾಗೂ ಕೋಚಿಂಗ್ ವಿಭಾಗದಲ್ಲಿ ಬದಲಾವಣೆ ತಂದರೆ ತಂಡ ಮತ್ತೊಮ್ಮೆ ಹಳೇ ಲಯಕ್ಕೆ ಮರಳಲಿದೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ.
ಆದರೆ, ಮ್ಯಾನೇಜ್ಮೆಂಟ್ ಈ ಕುರಿತು ಧೋನಿ ಬಳಿ ಇಲ್ಲಿವರೆಗೆ ಈ ವಿಷಯವನ್ನು ಚರ್ಚಿಸಿದ ಬಗ್ಗೆ ಖಚಿತ ಮಾಹಿತಿ ಇಲ್ಲವಾದರೂ, ಧೋನಿ ಮುಂದಿನ ಸೀಸನ್ನಲ್ಲಿ ತಂಡದ ಆಟಗಾರನಾಗಿ ಮೈದಾನಕ್ಕಿಳಿಯುವುದು ಬಹುತೇಕ ಡೌಟ್ ಎನ್ನುವುದು ಆಂತರಿಕ ಮಾಹಿತಿಯಾಗಿದೆ. ಆದರೆ ಈ ಬಗ್ಗೆ ಧೋನಿಯಾಗಲೀ, ಸಿಎಸ್ಕೆ ಮ್ಯಾನೇಜ್ಮೆಂಟ್ ಆಗಲೀ ಯಾವುದೇ ಬಹಿರಂಗ ಹೇಳಿಕೆ ನೀಡಿರದ ಕಾರಣ ಇದನ್ನೊಂದು ವದಂತಿ ದೃಷ್ಟಿಯಲ್ಲೇ ಸ್ವೀಕರಿಸುವುದು ಸೂಕ್ತವಾಗಿದೆ.
ಕೋಚಿಂಗ್ ವದಂತಿ ನಡುವೆ ಎಂ.ಎಸ್.ಧೋನಿ ಚೆನ್ನೈ ತಂಡದ ಮಾಲೀಕತ್ವದಲ್ಲಿ ಶೇ. 25 ರಷ್ಟು ಪಾಲುದಾರಿಕೆಯನ್ನು ಕೇಳಿದ್ದರು, ಆದರೆ ಮ್ಯಾನೇಜ್ಮೆಂಟ್ ಇದಕ್ಕೆ ಒಪ್ಪಲಿಲ್ಲ ಎಂಬ ಸುದ್ದಿ ಕೂಡ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಧೋನಿ ಪಾಲುದಾರಿಕೆ ಕೇಳಿದಕ್ಕಾಗಿ, ಕೋಚಿಂಗ್ ಜವಾಬ್ದಾರಿ ನೀಡಲಾಗುತ್ತಿದೆಯೇ? ಅಥವಾ ಧೋನಿ ಬದಲು ಬೇರೆ ಆಟಗಾರರು ಚೆನ್ನೈ ತಂಡಕ್ಕೆ ದೊರೆಯುತ್ತಿಲ್ಲವೇ? ಎಂಬ ಪ್ರಶ್ನೆಗಳಿಕೆ ಕಾಲವೇ ಉತ್ತರ ನೀಡಬೇಕಿದೆ, (ಏಜನ್ಸೀಸ್).