ನಾವು ವೈಭವ್ರನ್ನು ಆದಷ್ಟು ಬೇಗ ಔಟ್ ಮಾಡಲು ಪ್ರಯತ್ನಿಸುತ್ತೇವೆ, ಎಲ್ಲರಂತೆಯೇ ನಾವು ಕೂಡ ಕೆಲವು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಅವರ ಬ್ಯಾಟಿಂಗ್ ವಿಡಿಯೋಗಳನ್ನು ನೋಡಿದ್ದೇವೆ ಎಂದಿರುವ ಪಾರ್ಥಿವ್ ಪಟೇಲ್, ನಮ್ಮ ಯೋಜನೆಗಳನ್ನು ಮೈದಾನದಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸುವ ನಂಬಿಕೆ ನಮಗಿದ್ದು, ಆ ಪ್ಲಾನ್ ಏನೆಂಬುದನ್ನು ನಾನು ಈಗಲೇ ಹೇಳಲ್ಲ, ಅದನ್ನು ನೀವು ನೇರವಾಗಿ ಮೈದಾನದಲ್ಲೇ ನೋಡಲಿದ್ದೀರಿ ಎಂದು ಹೇಳಿದರು.