ಇದಕ್ಕೆ ಒಂದು ಇತಿಹಾಸವಿದೆ. 50 ವರ್ಷಗಳ ಹಿಂದೆ, ಇಂಗ್ಲೆಂಡ್ ನಾಯಕರೊಬ್ಬರು ಶ್ರೇಷ್ಠ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಇದೇ ಪದಗುಚ್ಛವನ್ನು ಬಳಸಿದ್ದರು. ಆದಾದ ನಂತರ ಏನಾಯಿತು ಎಂದು ನಮ್ಮೆಲ್ಲರಿಗೂ ತಿಳಿದಿದೆ. ದಕ್ಷಿಣ ಆಫ್ರಿಕಾ ತಂಡವು ಸರಣಿಯನ್ನು ಗೆದ್ದಿರುವ ಸಾಧ್ಯತೆ ಹೆಚ್ಚು, ಆದರೆ ನೀವು ಅಗ್ರಸ್ಥಾನದಲ್ಲಿದ್ದಾಗ, ನಿಮ್ಮ ಪದಗಳ ಆಯ್ಕೆ ಮುಖ್ಯವಾಗಿರುತ್ತದೆ. ನಾನು ನಿಜವಾಗಿಯೂ ಈ ಹೇಳಿಕೆಯನ್ನು ಕೋಚ್ ಅಥವಾ ಸಹಾಯಕ ಸಿಬ್ಬಂದಿಯಿಂದ ನಿರೀಕ್ಷಿಸಿರಲಿಲ್ಲ. ನೀವು ಗೆಲ್ಲುವಾಗ ಮೊದಲು ವಿನಮ್ರವಾಗಿರಬೇಕಿತ್ತು. ಆದರೆ, ಪತ್ರಿಕಾಗೋಷ್ಟಿಯಲ್ಲಿ ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದರು.