ಪದಾರ್ಪಣೆ ಪಂದ್ಯದಲ್ಲೇ ಹಲವು ದಾಖಲೆ ಬರೆದ ಪ್ರಫುಲ್​ ಹಿಂಗೆ, ಶಕೀಬ್​ ಹುಸೈನ್​!

ಪದಾರ್ಪಣೆ ಪಂದ್ಯದಲ್ಲೇ ಹಲವು ದಾಖಲೆ ಬರೆದ ಪ್ರಫುಲ್​ ಹಿಂಗೆ, ಶಕೀಬ್​ ಹುಸೈನ್​!
ಪದಾರ್ಪಣೆ ಪಂದ್ಯದಲ್ಲೇ ಹಲವು ದಾಖಲೆ ಬರೆದ ಪ್ರಫುಲ್​ ಹಿಂಗೆ, ಶಕೀಬ್​ ಹುಸೈನ್​!
Published on
ಹೈದರಾಬಾದ್​: ರಾಜಸ್ಥಾನ ರಾಯಲ್ಸ್​ ತಂಡವನ್ನು ಮೊದಲ 3 ಓವರ್​ಗಳಲ್ಲೇ ಸೋಲಿನ ಸುಳಿಗೆ ಸಿಲುಕಿಸಿದ ಸನ್​ರೈಸರ್ಸ್​ ಹೈದರಾಬಾದ್​ ತಂಡದ ದೇಶೀಯ ವೇಗದ ಬೌಲರ್​ಗಳಾದ ಪ್ರಫುಲ್​​ ಹಿಂಗೆ (34ಕ್ಕೆ 4) ಮತ್ತು ಶಕೀಬ್​ ಹುಸೈನ್​ (24ಕ್ಕೆ 4) 57 ರನ್​ ಗೆಲುವಿನ ವೇಳೆ ಹಲವು ದಾಖಲೆಗಳನ್ನು ಬರೆದಿದ್ದಾರೆ. ಹಿಂದಿನ 4 ಪಂದ್ಯಗಳಲ್ಲಿ ಬ್ಯಾಟಿಂಗ್​ ಅಬ್ಬರದೊಂದಿಗೆ ಗೆಲುವು ಸಾಧಿಸಿದ್ದ ಆರ್​ಆರ್​ ತಂಡದ ಅಗ್ರ ಐವರು ಬ್ಯಾಟರ್​ಗಳು ಪ್ರಫುಲ್​ ಹಿಂಗೆ (Praful Hinge)​, ಶಕೀಬ್​ ಹುಸೈನ್​ (Sakib Hussain) ದಾಳಿಗೆ ಕಂಗೆಟ್ಟಿದ್ದರು. ಸನ್​ರೈಸರ್ಸ್​ ತಂಡದ 217 ರನ್​ ಸವಾಲಿಗೆ ಪ್ರತಿಯಾಗಿ ಆರ್​ಆರ್​ ತಂಡ 19 ಓವರ್​ಗಳಲ್ಲಿ 159 ರನ್​ಗಳಿಗೆ ಸರ್ವಪತನ ಕಂಡಿತ್ತು. ಯಶಸ್ವಿ ಜೈಸ್ವಾಲ್​ (1), ವೈಭವ್​ ಸೂರ್ಯವಂಶಿ (0), ಧ್ರು ಜುರೆಲ್​ (0), ಪ್ರಿಟೋರಿಯಸ್​ (0), ನಾಯಕ ರಿಯಾನ್​ ಪರಾಗ್​ (4) ತಂಡದ ಮೊತ್ತ 9 ರನ್​ ಆಗುವಷ್ಟರಲ್ಲೇ ಡಗೌಟ್​ ಸೇರಿದ್ದರು. ನಂತರ ರವೀಂದ್ರ ಜಡೇಜಾ (45), ಡೊನೊವನ್​ ೆರೀರ (69) ಹೋರಾಟದಿಂದ ಆರ್​ಆರ್​ ಮಾನ ಉಳಿಸಿಕೊಂಡಿತು.
ವಿದರ್ಭದ 24 ವರ್ಷದ ಪ್ರಫುಲ್​ ಹಿಂಗೆ ಐಪಿಎಲ್​ ಇನಿಂಗ್ಸ್​ನ ಮೊದಲ ಓವರ್​ನಲ್ಲೇ 3 ವಿಕೆಟ್​ ಕಬಳಿಸಿದ ಮೊದಲ ಬೌಲರ್​ ಎನಿಸಿದರು. ಒಟ್ಟಾರೆ ಟಿ20 ಕ್ರಿಕೆಟ್​ ಪಂದ್ಯದಲ್ಲಿ ಇದು 19ನೇ ದೃಷ್ಟಾಂತವಾಗಿದೆ. ಪ್ರಫುಲ್​ ಐಪಿಎಲ್​ನಲ್ಲಿ ಪದಾರ್ಪಣೆ ಪಂದ್ಯದ ಮೊದಲ 3 ಓವರ್​ನಲ್ಲೇ 4 ವಿಕೆಟ್​ ಕಬಳಿಸಿದ ಮೊದಲಿಗರೆನಿಸಿದರು.

ಪ್ರಫುಲ್​-ಶಕೀಬ್​ ಐಪಿಎಲ್​ ಇನಿಂಗ್ಸ್​ ಒಂದರಲ್ಲಿ ತಲಾ 4 ವಿಕೆಟ್​ ಹಂಚಿಕೊಂಡ 4ನೇ ಜೋಡಿ ಎನಿಸಿದರು. ಅಲ್ಲದೆ ಈ ಸಾಧನೆ ಮಾಡಿದ 2ನೇ ಭಾರತೀಯ ಜೋಡಿಯಾಗಿದ್ದಾರೆ. 2023ರಲ್ಲಿ ಮೊಹಮದ್​ ಶಮಿ&ಮೋಹಿತ್​ ಶರ್ಮ ಗುಜರಾತ್​ ಪರ ಈ ಸಾಧನೆ ಮಾಡಿದ್ದರು.

ಸನ್​ರೈಸರ್ಸ್​ ತಂಡ ಮೊದಲ 18 ಎಸೆತಗಳಲ್ಲೇ 5 ವಿಕೆಟ್​ ಕಬಳಿಸಿತು. ಇದು ಐಪಿಎಲ್​ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 5 ವಿಕೆಟ್​ ಬಿದ್ದ ದೃಷ್ಟಾಂತವಾಗಿದೆ. 2011ರಲ್ಲಿ ಕೊಚ್ಚಿ ಟಸ್ಕರ್ಸ್​ 19 ಎಸೆತಗಳಲ್ಲಿ 5 ವಿಕೆಟ್​ ಕಳೆದುಕೊಂಡಿದ್ದು ಹಿಂದಿನ ಅತಿ ಕಡಿಮೆ ಎಸೆತವಾಗಿತ್ತು. ಆರ್​ಆರ್​ ತಂಡ ಮೊದಲ 5 ವಿಕೆಟ್​ಗಳಿಂದ 9 ರನ್​ ಮಾತ್ರ ಗಳಿಸಿದರೆ, ನಂತರದ 5 ವಿಕೆಟ್​ಗಳಿಂದ 150 ರನ್​ ಸೇರಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net