

ಡಾರ್ವಿನ್: ಆಸ್ಟ್ರೆಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಎಡಗೈ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ನ ಮೊದಲ ದಿನ ಆರಂಭಿಕ ಶದ್ಮನ್ ಇಸ್ಲಾಂ (20) ವಿಕೆಟ್ ಕಬಳಿಸುವ ಮೂಲಕ ಸ್ಟಾರ್ಕ್ ಶ್ರೀಲಂಕಾದ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ (433) ಹೆಸರಿನಲ್ಲಿದ್ದ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು.
ಅಂತಾರಾಷ್ಟ್ರೀಯ ಎಡಗೈ ಜನರ ದಿನಾಚರಣೆಯಂದೇ (
international left handers day
) ಅವರು ಈ ಸಾಧನೆ ಮಾಡಿರುವುದು ವಿಶೇಷವೆನಿಸಿದೆ. ಇದೇ ವೇಳೆ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ನಲ್ಲಿ 434 ವಿಕೆಟ್ ಗಳಿಸಿದ ಭಾರತದ ಕಪಿಲ್ ದೇವ್ ಸಾಧನೆಯನ್ನೂ ಸರಿಗಟ್ಟಿದ್ದಾರೆ.