ಇಂಗ್ಲೆಂಡ್ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಯಿಂದ ಸ್ಟಾರ್ ಸ್ಪಿನ್ನರ್ ಹಾಗೂ ವೇಗಿ ಔಟ್: ಭಾರತ ತಂಡಕ್ಕೆ ಪ್ರಿನ್ಸ್ ಯಾದವ್ ಸೇರ್ಪಡೆ

Published on
ಬರ್ಮಿಂಗ್‌ಹ್ಯಾಂ: ಮಂಗಳವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವೇಗಿ ಹರ್ಷಿತ್ ರಾಣಾ ಹೊರಬಿದ್ದಿದ್ದು, ಅವರ ಬದಲಿಗೆ ಪ್ರಿನ್ಸ್ ಯಾದವ್ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮಾಸಾಂತ್ಯದಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿ ಗೈರಾಗಲಿದ್ದು, ಅವರ ಸ್ಥಾನವನ್ನು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ತುಂಬಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಮಾತ್ರ ಆಯ್ಕೆಯಾಗಿದ್ದ ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ ಗೈರಿನಲ್ಲಿ ಏಕದಿನ ತಂಡದಲ್ಲೂ ಮುಂದುವರಿಯಲಿದ್ದಾರೆ. ಗ್ರೇಡ್ 1 ಹಂತದ ಬಲ ತೊಡೆಯ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಹರ್ಷಿತ್ ರಾಣಾ, ಪುನಶ್ಚೇತನಕ್ಕಾಗಿ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ (ಸಿಒಇ) ಆಗಮಿಸಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20ಯಲ್ಲಿ ಎಡ ತೊಡೆಯ ಸ್ನಾಯು ಸೆಳೆತದಿಂದ ವರುಣ್ ಚಕ್ರವರ್ತಿ, ಗ್ರೇಡ್-2 ಹಂತದ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಪೂರ್ಣ ಚೇತರಿಕೆಗೆ ಕನಿಷ್ಠ 3 ರಿಂದ 6 ತಿಂಗಳು ಸಮಯ ಹಿಡಿಯಲಿದೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net