378 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದಾಗ, ತಂಡದಲ್ಲಿರುವ ಒಬ್ಬರು ಅಥವಾ ಇಬ್ಬರು ಅಗ್ರ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್‌ಗಳನ್ನು ಕೊಡಬೇಕು. ಆಗ ಗೆಲುವಿಗೆ ನಾವು ಹತ್ತಿರವಾಗಲು ಸಾಧ್ಯ. ನಮ್ಮ ತಂಡದಲ್ಲಿ ವನಜಾ ಸಹನ್ (62 ರನ್) ಮತ್ತು ಸದೀರಾ ಸಮರವಿಕ್ರಮ (52) ಉತ್ತಮ ಜೊತೆಯಾಟ ನೀಡಿದರು. ಆದರೆ, ಗುರಿ ತಲುಪಲು ಇಷ್ಟು ರನ್‌ಗಳು ಸಾಲಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಇನ್ನೂ ಹೆಚ್ಚು ಕೊಡುಗೆ ಸಿಕ್ಕಿದ್ದರೆ, ಖಂಡಿತ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂದರು.