ವಿನೀತ್​ ಶತಕ ವ್ಯರ್ಥ; ಶ್ರೀಲಂಕಾದಲ್ಲಿ ಏಕದಿನ ಸರಣಿ ಸೋತ ಭಾರತದ ಕಿರಿಯರು

ವಿನೀತ್​ ಶತಕ ವ್ಯರ್ಥ; ಶ್ರೀಲಂಕಾದಲ್ಲಿ ಏಕದಿನ ಸರಣಿ ಸೋತ ಭಾರತದ ಕಿರಿಯರು
ವಿನೀತ್​ ಶತಕ ವ್ಯರ್ಥ; ಶ್ರೀಲಂಕಾದಲ್ಲಿ ಏಕದಿನ ಸರಣಿ ಸೋತ ಭಾರತದ ಕಿರಿಯರು
Published on
ಹಂಬಂತೋಟ: ವಿಕೆ ವಿನೀತ್​ (131 ರನ್​, 136 ಎಸೆತ, 13 ಬೌಂಡರಿ, 3 ಸಿಕ್ಸರ್​) ಶತಕದ ಹೊರತಾಗಿಯೂ ಭಾರತ ತಂಡ 19 ವಯೋಮಿತಿ (Under 19) ಏಕದಿನ ಕ್ರಿಕೆಟ್​ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು 1 ವಿಕೆಟ್​ನಿಂದ ವೀರೋಚಿತ ಸೋಲು ಅನುಭವಿಸಿದೆ. ಇದರಿಂದ ಭಾರತ 3 ಪಂದ್ಯಗಳ ಸರಣಿಯನ್ನು 1-2ರಿಂದ ಕೈಚೆಲ್ಲಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ 8 ವಿಕೆಟ್​ಗೆ 290 ರನ್​ ಗಳಿಸಿತು. ಪ್ರತಿಯಾಗಿ ಲಂಕಾ 139 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸೋಲಿಗೆ ಸಿಲುಕಿತ್ತು. ಬಳಿಕ ಚಮಿಕಾ ಹೀನಟಿಗಲ (84*) ಹೋರಾಟದಿಂದ ಲಂಕಾ ಕೊನೇ ಎಸೆತದಲ್ಲಿ 9 ವಿಕೆಟ್​ಗೆ 291 ರನ್​ ಗಳಿಸಿ ಜಯಿಸಿತು. ಕೊನೇ 2 ಎಸೆತಗಳಲ್ಲಿ ಲಂಕಾಗೆ 7 ರನ್​ ಬೇಕಿದ್ದಾಗ ಹೀನಟಿಗಲ ಸಿಕ್ಸರ್​ ಮತ್ತು ಸಿಂಗಲ್ಸ್​ ಕಸಿದರು.


ಭಾರತ: 8 ವಿಕೆಟ್​ಗೆ 290 (ವಿಕೆ ವಿನೀತ್​ 131, ಲಕ್ಷ$್ಯ 61, ಶವಿನ್​ ವಿನೋದ್​ 26, ಸೇನೆವಿರತ್ನೆ 41ಕ್ಕೆ 4, ಗಿಮ್ಹನ್​ 63ಕ್ಕೆ 2), ಶ್ರೀಲಂಕಾ 9 ವಿಕೆಟ್​ಗೆ 291 (ಮಹಾವಿಥನ 22, ವೆಕುನಗೋಡ 67, ಕವಿಜಾ 29, ವಿಥನಪಥಿರಣ 31, ಹೀನಟಿಗಲ 84, ಗಿಮ್ಹನ್​ 23, ಶವಿನ್​ 41ಕ್ಕೆ 3, ಅನ್ಮೋಲ್​ಜೀತ್​ 42ಕ್ಕೆ 4, ಮೋಹಿತ್​ ಉಲ್ವಾ 66ಕ್ಕೆ 2).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net