ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್‌ಗೆ ಟ್ರಾವಿಸ್ ಹೆಡ್ (46 ರನ್, 21 ಎಸೆತ) ಮತ್ತು ಅಭಿಷೇಕ್ ಶರ್ಮಾ (48 ರನ್) ಸ್ಫೋಟಕ ಆರಂಭ ನೀಡಿದರು. ಮಧ್ಯದಲ್ಲಿ ದಿಢೀರ್ ಕುಸಿತ ಕಂಡು 118 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ ಆಸರೆಯಾಗಿದ್ದು ಹೆನ್ರಿಚ್ ಕ್ಲಾಸೆನ್. ಕೇವಲ 35 ಎಸೆತಗಳಲ್ಲಿ 52 ರನ್ ಸಿಡಿಸಿದ ಕ್ಲಾಸೆನ್ ಮತ್ತು ನಿತೀಶ್ ರೆಡ್ಡಿ ಅವರ ಜವಾಬ್ದಾರಿಯುತ ಆಟದಿಂದ ಹೈದರಾಬಾದ್ 226/8 ರನ್‌ಗಳ ಬೃಹತ್ ಮೊತ್ತ ಪೇರಿಸಿತು.