ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ... 86 ರನ್​ಗೆ ಆಲ್​ಔಟ್​ ಆದ್ರೂ ಪ್ಯಾಟ್​ ಪಡೆಗಿದೆ ಪ್ಲೇಆಫ್ ಚಾನ್ಸ್​! | SRH

ಸನ್​ರೈಸರ್ಸ್​ ಹೈದರಾಬಾದ್​ ನಾಯಕ ಪ್ಯಾಟ್​ ಕಮ್ಮಿನ್ಸ್​
ಸನ್​ರೈಸರ್ಸ್​ ಹೈದರಾಬಾದ್​ ನಾಯಕ ಪ್ಯಾಟ್​ ಕಮ್ಮಿನ್ಸ್​
Published on
SRH vs GT: ನಿನ್ನೆ (ಮೇ.12) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 19ನೇ ಐಪಿಎಲ್​ ಆವೃತ್ತಿಯ ಪಂದ್ಯದಲ್ಲಿ ಶುಭಮನ್ ಗಿಲ್​ ಪಡೆ ಎದುರು ಸನ್‌ರೈಸರ್ಸ್ ಹೈದರಾಬಾದ್ ಹೀನಾಯ ಸೋಲುಂಡಿತು.
82 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದ ಸನ್​ರೈಸರ್ಸ್​ ಹೈದರಾಬಾದ್​, ಈ ಸೀಸನ್​ನಲ್ಲಿ ತೋರಿದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಪಂದ್ಯ ಕೈಚೆಲ್ಲಿದ ಎಸ್​ಆರ್​ಎಚ್​ನ ರನ್ ರೇಟ್​ (+0.331) ಕುಸಿದಿದೆ. ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸ್ಥಾನವು ಅಲುಗಾಡಿಲ್ಲ. ಆದರೆ, ಇಲ್ಲಿಂದ ಅವರ ಪ್ಲೇಆಫ್ ಅವಕಾಶಗಳು ಜಟಿಲವಾಗಲಿದೆ. ಮುಂದಿನ ಎರಡು ಪಂದ್ಯಗಳನ್ನು ಪ್ಯಾಟ್​ ಕಮ್ಮಿನ್ಸ್​ ಪಡೆ ಗೆಲ್ಲಲೇಬೇಕಿದೆ.
ಮೊದಲು ಬ್ಯಾಟ್​ ಮಾಡಿದ ಗುಜರಾತ್ ಟೈಟಾನ್ಸ್, 169 ರನ್‌ಗಳನ್ನು ಕಲೆಹಾಕಲು ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿದ ಆರೆಂಜ್ ಆರ್ಮಿ ಕೇವಲ 14.5 ಓವರ್‌ಗಳಲ್ಲಿ 86 ರನ್‌ಗೆ ಆಲ್​ಔಟ್​ ಆಯಿತು. ಗುಜರಾತ್ ಪರ ವೇಗಿ ಕಗಿಸೊ ರಬಾಡ, ತಮ್ಮ ಅತ್ಯುತ್ತಮ ಬೌಲಿಂಗ್‌ನಿಂದ ಎಸ್​ಆರ್​ಎಚ್​ ಬ್ಯಾಟರ್​ಗಳ ಆರ್ಭಟವನ್ನು ಕಟ್ಟಿಹಾಕಲು ಯಶಸ್ವಿಯಾದರು. ಪವರ್‌ಪ್ಲೇನಲ್ಲಿಯೇ ಮೂರು ಬಹುಮುಖ್ಯ ವಿಕೆಟ್‌ಗಳನ್ನು ಪಡೆಯುವ ಮೂಲಕ ಎಸ್​ಆರ್​ಎಚ್​ನಿಂದ ಗೆಲುವನ್ನು ಕಸಿದುಕೊಂಡಿತು.
ರಬಾಡ, ತಮ್ಮ 4 ಓವರ್‌ಗಳಲ್ಲಿ 28 ರನ್‌ಗೆ 3 ವಿಕೆಟ್‌ಗಳನ್ನು ಪಡೆದರು. ಕೇವಲ 86 ರನ್​ಗೆ ಆಲ್​ಔಟ್​ ಆಗುವ ಮೂಲಕ 19ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅತ್ಯಂತ ಕೆಟ್ಟ ದಾಖಲೆಯನ್ನು ನಿರ್ಮಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಎಸ್​ಆರ್​ಎಚ್​ ದಾಖಲಿಸಿದ ಅತ್ಯಂತ ಕಡಿಮೆ ಸ್ಕೋರ್ ಎಂಬುದು ಇಲ್ಲಿ ಗಮನಾರ್ಹ. 2019ರಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ 96 ರನ್‌ಗೆ ಆಲೌಟ್ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಎಸ್‌ಆರ್‌ಎಚ್‌ನ ಲೋ ಸ್ಕೋರ್​ಗಳಿವು

86 vs ಗುಜರಾತ್ ಟೈಟಾನ್ಸ್, ಅಹಮದಾಬಾದ್ (2026)
96 vs ಮುಂಬೈ ಇಂಡಿಯನ್ಸ್, ಹೈದರಾಬಾದ್ (2019)
113 vs ಮುಂಬೈ ಇಂಡಿಯನ್ಸ್, ಹೈದರಾಬಾದ್ (2015)
113 vs ಕೆಕೆಆರ್, ಚೆನ್ನೈ (2024 ಫೈನಲ್)
114 vs ಪಂಜಾಬ್ ಕಿಂಗ್ಸ್, ದುಬೈ (2022)

ಪ್ಲೇಆಫ್​ ಲೆಕ್ಕಾಚಾರ

ಈ ಸೀಸನ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದುವರೆಗೆ 12 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ಪಂದ್ಯಗಳನ್ನು ಗೆದ್ದು 5 ಪಂದ್ಯಗಳಲ್ಲಿ ಸೋತಿದೆ. ಪ್ರಸ್ತುತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ಯಾಟ್​ ಕಮ್ಮಿನ್ಸ್ ಪಡೆಯು ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನು (ಮೇ.18ರಂದು ಚೆನ್ನೈ ವಿರುದ್ಧ ಮತ್ತು ಮೇ.22ರಂದು RCB ವಿರುದ್ಧ) ಆಡಲಿದೆ.

ಎರಡೂ ಪಂದ್ಯಗಳನ್ನು ಗೆದ್ದರೆ...

ಅಗ್ರ 4ರಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಚೆನ್ನೈ ಮತ್ತು ಆರ್‌ಸಿಬಿ ವಿರುದ್ಧ ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಯಾವುದೇ ಡ್ರಾವನ್ನು ಲೆಕ್ಕಿಸದೆ! ಆಗ ಮಾತ್ರ ಎಸ್‌ಆರ್‌ಹೆಚ್ 18 ಅಂಕಗಳನ್ನು ಪಡೆಯಲು ಸಾಧ್ಯ. ಅವರು ಉತ್ತಮ ರನ್​ರೇಟ್​ ಹೊಂದಿದ್ದರೆ ಮತ್ತು ಇತರ ತಂಡಗಳ ಡ್ರಾ ಒಟ್ಟಿಗೆ ಬಂದರೆ, ಅಗ್ರ 2ರಲ್ಲಿ ಸ್ಥಾನ ಖಚಿತವಾಗಲಿದೆ.

ಒಂದು ಪಂದ್ಯವನ್ನು ಗೆದ್ದರೆ?

ಎಸ್‌ಆರ್‌ಹೆಚ್ ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಸೋತರೂ ಸಹ, ಪ್ಲೇಆಫ್ ತಲುಪುವ ಅವಕಾಶವಿದೆ. ಆಗ ಸನ್‌ರೈಸರ್ಸ್ ತಮ್ಮ ಖಾತೆಯಲ್ಲಿ 16 ಅಂಕಗಳನ್ನು ಹೊಂದಲಿದೆ. ಆಗಲೂ, ಅವರು ಇತರ ತಂಡಗಳ ಫಲಿತಾಂಶಗಳು ಮತ್ತು ರನ್ ರೇಟ್​ ಆಧರಿಸಿ, ತಮ್ಮ ರನ್​ರೇಟ್ ಬ್ಯಾಲೆನ್ಸ್​ ಕಾಪಾಡಿಕೊಂಡರೆ ಪ್ಲೇಆಫ್​ ಕನಸು ಜೀವಂತ,(ಏಜೆನ್ಸೀಸ್).​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net