ನಾನೊಬ್ಬ ಫಿಕ್ಸರ್​, ದೇಶದ್ರೋಹಿ ಅಂತೆ! ಆ ಕೆಟ್ಟ ಪದ... ಹೆಡ್​ ಕೋಚ್​ ಗಂಭೀರ್​ಗೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ ಶ್ರೀಶಾಂತ್​

ಎಸ್​. ಶ್ರೀಶಾಂತ್​, ಗೌತಮ್ ಗಂಭೀರ್
ಎಸ್​. ಶ್ರೀಶಾಂತ್​, ಗೌತಮ್ ಗಂಭೀರ್
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಹೆಡ್​ ಕೋಚ್​ ಗೌತಮ್ ಗಂಭೀರ್ ವಿರುದ್ಧ ಶ್ರೀಶಾಂತ್ ಕಿಡಿ
  • ಫಿಕ್ಸರ್​ ಮತ್ತು ದೇಶದ್ರೋಹಿ ಎಂದು ಕರೆದಿದ್ದ ಗಂಭೀರ್
Sreesanth: ಟೀಮ್ ಇಂಡಿಯಾ ಮಾಜಿ ವೇಗಿ ಎಸ್​. ಶ್ರೀಶಾಂತ್, ತಮ್ಮ ಸಹ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರೊಟ್ಟಿಗಿನ ಹಳೆಯ ವಿವಾದವನ್ನು ಇಂದಿಗೂ ಕ್ರಿಕೆಟ್​ ಪ್ರೇಮಿಗಳಿಗೆ ಪದೇ ಪದೇ ನೆನಪಿಸುತ್ತಿರುವುದು ಸದ್ಯ ಮುಗಿಯದ ಅಧ್ಯಾಯ ಎನ್ನುವಂತೆ ಮಾಡಿದೆ. ಇತ್ತೀಚೆಗಷ್ಟೇ, ಸಂದರ್ಶನವೊಂದರಲ್ಲಿ ಬಜ್ಜಿಗೆ ನೇರ ಸವಾಲು ಹಾಕಿದ ಶ್ರೀಶಾಂತ್​, ಅಲ್ಲೆಲ್ಲೋ ಮಾತಾಡೋದು ಬೇಡ. ನೇರವಾಗಿ ಮೈದಾನಕ್ಕೆ ಬನ್ನಿ, ಫೇಸ್​ ಟು ಫೇಸ್​ ಇಳಿಯೋಣ ಎಂದು ಓಪನ್ ಚಾಲೆಂಜ್ ಹಾಕಿದರು. ಇದಕ್ಕೆ ಇನ್ನೂ ಹರ್ಭಜನ್​ರಿಂದ ಯಾವುದೇ ಉತ್ತರ ಬಂದಿಲ್ಲ. ಈ ಮಧ್ಯೆಯೇ, ಹೆಡ್​ ಕೋಚ್​ ಗೌತಮ್ ಗಂಭೀರ್ ಹೊರಿಸಿದ್ದ ಆರೋಪಕ್ಕೆ ಕಿಡಿಕಾರಿದ್ದಾರೆ. ​
2023ರ ಡಿಸೆಂಬರ್​ಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್​ಸಿ) ಪಂದ್ಯದ ಸಂದರ್ಭದಲ್ಲಿ ಇಬ್ಬರ ನಡುವಿನ ಬಿಸಿ ವಾಗ್ವಾದ ಆ ಸಮಯದಲ್ಲಿ ಕ್ರಿಕೆಟ್​ ಲೋಕದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಯಿತು. 'ದಿ ಲಲ್ಲಂಟಾಪ್' ಸಂದರ್ಶನದಲ್ಲಿ, ಗಂಭೀರ್ ನಡೆದುಕೊಂಡ ರೀತಿಯನ್ನು, ಆಡಿದ ಮಾತುಗಳನ್ನು ನೆನಪಿಸಿಕೊಂಡ ಶ್ರೀಶಾಂತ್​, ನನ್ನನ್ನು ಒಬ್ಬ ಫಿಕ್ಸರ್ ಮತ್ತು ದೇಶದ್ರೋಹಿ ಎಂದು ಕರೆದಿದ್ದರು. ಜೊತೆಗೆ F* ಪದವನ್ನು ಬಳಸಲು ಮುಂದಾದರು. ಆ ಲೀಗ್​ನ ಪಂದ್ಯದಲ್ಲಿ ನನ್ನ ಮತ್ತು ಗಂಭೀರ್​ ನಡುವೆ ಒಂದು ಬೌನ್ಸರ್​ ಎಸೆದ ಕಾರಣಕ್ಕೆ ಜಗಳ ಶುರುವಾಯಿತು. ಆಗ ಎಫ್​ ಪದವನ್ನು ಹೇಳಲು ಮುಂದಾದ ಅವರು, ಅದರ ಬದಲಿಗೆ ತಕ್ಷಣವೇ ಫಿಕ್ಸರ್​ ಹೇಳಿ, ದೇಶದ್ರೋಹಿ ಎಂದರು.
ಗಂಭೀರ್ ಒಬ್ಬ ಒಳ್ಳೆಯ ಕ್ರಿಕೆಟಿಗ. ಆದರೆ, ಮೆಂಟರ್​ ಆಗಿ ಅಥವಾ ಕೋಚ್​ ಆಗಿ ನನಗೆ ಗೊತ್ತಿಲ್ಲ. ಆ ಸಮಯದಲ್ಲಿ ನನ್ನನ್ನು ದೇಶದ್ರೋಹಿ ಎಂದು ಗೌತಮ್ ಹೇಳಿದಾಗ, 'ಆರ್​ ಯು ಓಕೆ ಭಾಯ್​'? ಅಂತ ನಾನು ಕೇಳಿದೆ ಅಷ್ಟೇ ಎಂದರು. 2013ರಲ್ಲಿ ಸ್ಪಾಟ್​ ಫಿಕ್ಸಿಂಗ್​ ಕೇಸ್​ನಲ್ಲಿ ಶ್ರೀಶಾಂತ್​ ಬ್ಯಾನ್​ ಆದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಗಂಭೀರ್​ ಈ ರೀತಿ ಸಿಟ್ಟಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ತಮ್ಮ ವಿರುದ್ಧ ಕೆಟ್ಟ ಪದಗಳನ್ನು ಬಳಸಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಮೂಲಕ ಬೂದಿ ಮುಚ್ಚಿದ ಕೆಂಡದಂತಿದ್ದ ವಿವಾದಕ್ಕೆ ಶ್ರೀಶಾಂತ್ ಕಿಚ್ಚು ಹಚ್ಚಿರುವುದಂತು ಇಲ್ಲಿ ಸ್ಪಷ್ಟ,(ಏಜೆನ್ಸೀಸ್).​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net