ಆತನನ್ನು ಬ್ಲಾಕ್​ ಮಾಡಿ ಬಿಸಾಕಿದ್ದೀನಿ! ಕಪಾಳಕ್ಕೆ ಬಾರಿಸಿದ್ದ 'ಬಜ್ಜಿ'ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಶ್ರೀಶಾಂತ್​

ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್​ ಕಪಾಳಮೋಕ್ಷ ವಿವಾದ
ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್​ ಕಪಾಳಮೋಕ್ಷ ವಿವಾದ
Published on

ಪ್ರಮುಖ ಮುಖ್ಯಾಂಶಗಳು

  • 2008ರ ಐಪಿಎಲ್​ನಲ್ಲಿ ಶ್ರೀಶಾಂತ್​ಗೆ ಕಪಾಳಮೋಕ್ಷ ಮಾಡಿದ್ದ ಹರ್ಭಜನ್​ ಸಿಂಗ್​
  • ಬಜ್ಜಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್​ ಮಾಡಿ ಬಿಸಾಕಿದ್ದೇನೆ
  • ವರ್ಷಗಳ ಹಳೆಯ ವಿವಾದಕ್ಕೆ ಕಡೆಗೂ ತೆರೆ ಎಳೆದ ಶ್ರೀಶಾಂತ್
ನವದೆಹಲಿ: 2008ರ ಐಪಿಎಲ್​ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್​ಗೆ ಮೈದಾನದಲ್ಲೇ ಕಪಾಳ ಮೋಕ್ಷ ಮಾಡಿದ್ದ ಹರ್ಭಜನ್ ಸಿಂಗ್​, ಅಂದು ದೊಡ್ಡ ವಿವಾದಕ್ಕೆ ಕಾರಣರಾದರು. ಅಂದಿನಿಂದ ಇಂದಿನವರೆಗೆ ಇವರಿಬ್ಬರು ಎಲ್ಲಿಯೂ ಮಾತನಾಡಿಲ್ಲ, ಯಾವುದೇ ಕ್ರಿಕೆಟ್​ ಈವೆಂಟ್​ಗಳಲ್ಲಿಯೂ ಮುಖಾಮುಖಿ ಭೇಟಿ ಕೂಡ ಮಾಡಿಲ್ಲ. ಹೀಗಿರುವಾಗ, ಬೂದಿ ಮುಚ್ಚಿದ ಕೆಂಡದಂತಿದ್ದ ವಿವಾದಕ್ಕೆ ಕಡೆಗೂ ಶ್ರೀಶಾಂತ್​ ಪುಲ್​ಸ್ಟಾಪ್​ ಹಾಕಿದ್ದಾರೆ.
ಇತ್ತೀಚಿಗಿನ ಬೆಳವಣಿಗೆಯಲ್ಲಿ ಇವರಿಬ್ಬರ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಹರ್ಭಜನ್​ ಜೊತೆಗೆ ತನಗೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ನಾನು ಆತನನ್ನು ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಬ್ಲಾಕ್​ ಮಾಡಿ ಬಿಸಾಕಿದ್ದೇನೆ ಎಂದು ಶ್ರೀಶಾಂತ್​ ಪ್ರತಿಕ್ರಿಯಿಸಿದ್ದಾರೆ. ವರ್ಷಗಳ ಹಳೆಯ ವಿಚಾರ ಮತ್ತೆ ಚರ್ಚೆಗೆ ಬರಲು ಕಾರಣವೇ ಹರ್ಭಜನ್​ ಮಾಡಿರುವ ತಮ್ಮ ವಿವಾದಕ್ಕೆ ಸಂಬಂಧಿಸಿದ ಹೊಸ ಆ್ಯಡ್. ​

1 ಕೋಟಿ ರೂ. ದುಡ್ಡು

'ಮಾತೃಭೂಮಿ'ಗೆ ನೀಡಿದ ಸಂರ್ಶನದಲ್ಲಿ ಮಾತನಾಡಿರುವ ಶ್ರೀಶಾಂತ್​, ಇಲ್ಲಿಯವರೆಗೆ ನಾನು ಯಾವ ಸಂದರ್ಶನದಲ್ಲಿಯೂ ಕುಳಿತು ಬಜ್ಜಿ ಬಗ್ಗೆ ಮಾತನಾಡಿಲ್ಲ. ಇದೇ ಮೊದಲು. ನನಗೆ ಆತನೊಂದಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಇತ್ತೀಚೆಗೆ ತಮ್ಮಿಬ್ಬರ ವಿವಾದಕ್ಕೆ ಸಂಬಂಧಿಸಿದಂತೆ ಹರ್ಭಜನ್​ ಒಂದು ಆ್ಯಡ್​ ಮಾಡಿದರು. ಇದರಿಂದ ಆತ 80 ಲಕ್ಷ ರೂ.ದಿಂದ 1 ಕೋಟಿ ರೂ. ಹಣ ಮಾಡಿಕೊಂಡಿದ್ದಾನೆ. ಇದರ ಬೆನ್ನಲ್ಲೇ ನನಗೆ ಫೋನ್​ ಮಾಡಿ, ನೀನು ಇದನ್ನು ಶೇರ್​ ಮಾಡು ಎಂದು ಹೇಳಿದಾಗ ನನಗೆ ಪಿತ್ತ ನೆತ್ತಿಗೇರಿತು ಎಂದಿದ್ದಾರೆ.

ಆತನನ್ನು ಕ್ಷಮಿಸೋದಿಲ್ಲ

ನಮಗೆ ಯಾರಿಂದಲೋ ತೊಂದರೆ, ನೋವಾಗಿದೆ ಎಂದರೆ ಅವರನ್ನು ಮರೆತು ಬಿಡಬೇಕು. ಆದರೆ, ಅವರು ಮಾಡಿದ್ದನ್ನು ಮಾತ್ರ ಮರೆಯಬಾರದು. ಅದಕ್ಕೆ ಉತ್ತಮ ನಿದರ್ಶನವೇ ಹರ್ಭಜನ್ ಸಿಂಗ್. ನನಗೆ ಆತನೊಂದಿಗೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ಮುಂಚೆ ಬಜ್ಜಿಯನ್ನು ಅಣ್ಣ ಎಂದು ಕರೆಯುತ್ತಿದ್ದೆ. ಆದರೆ, ಕಳೆದ ಒಂದೆರೆಡು ತಿಂಗಳ ಹಿಂದೆ ಬಂದ ಆ್ಯಡ್​ ಬಳಿಕ ಆತನನ್ನು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್​ ಮಾಡಿದ್ದೇನೆ ಎಂದರು.
ನನ್ನ ಪೋಷಕರು ಇತರರನ್ನು ಕ್ಷಮಿಸು. ಆದರೆ, ಅವರು ಏನು ಮಾಡಿದರು, ಕಲಿಸಿಕೊಟ್ಟರು ಎಂಬುದನ್ನು ಮರೆಯದಿರು ಎಂಬುದನ್ನು ಹೇಳಿಕೊಟ್ಟಿದ್ದಾರೆ. ನನಗೆ ಬಜ್ಜಿ ಬಗ್ಗೆ ಯಾವುದೇ ದೂರಿಲ್ಲ. ಅವನು ಮತ್ತು ಅವನ ಕುಟುಂಬಕ್ಕೆ ದೇವರು ಒಳ್ಳೆಯದನ್ನೇ ಮಾಡಲಿ. ಅಂದು ಆತ ಮಾಡಿದ್ದನ್ನು ನಾನು ಮಾತ್ರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net