ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸ್ಪೇನ್​ ಸತತ 24 ಗೆಲುವಿನ ವಿಶ್ವದಾಖಲೆ!

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸ್ಪೇನ್​ ಸತತ 24 ಗೆಲುವಿನ ವಿಶ್ವದಾಖಲೆ!
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸ್ಪೇನ್​ ಸತತ 24 ಗೆಲುವಿನ ವಿಶ್ವದಾಖಲೆ!
Published on

ಬಾರ್ಸಿಲೋನಾ: ಕಳೆದ ತಿಂಗಳು ಫಿಫಾ ವಿಶ್ವಕಪ್​ ಗೆದ್ದು ಬೀಗಿದ್ದ ಸ್ಪೇನ್ (

spain cricket

)​ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸತತ 24 ಗೆಲುವಿನ ವಿಶ್ವದಾಖಲೆ ಬರೆದಿದೆ. ಸದರ್ನ್​ ಫಿನ್​ಲ್ಯಾಂಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸಬ್​ ರೀಜನಲ್​ ಯುರೋಪ್​ ಅರ್ಹತಾ ಟೂರ್ನಿಯಲ್ಲಿ ಬಲ್ಗೇರಿಯಾ ಎದುರು ಗೆಲುವು ದಾಖಲಿಸುವ ಮೂಲಕ ಸ್ಪೇನ್​ ಈ ದಾಖಲೆ ನಿರ್ಮಿಸಿದೆ.


ಸ್ಪೇನ್​ 2023ರಿಂದ ಸತತ 21 ಟಿ20 ಪಂದ್ಯಗಳನ್ನು ಗೆಲ್ಲುತ್ತ ಬಂದಿದ್ದು, ಆಸ್ಟ್ರೆಲಿಯಾ 2003ರಲ್ಲಿ ಸತತ 20 ಪಂದ್ಯ ಜಯಿಸಿದ್ದ ದಾಖಲೆಯನ್ನು ಮುರಿದಿದೆ. ಆಸ್ಟ್ರೆಲಿಯಾ 2023ರಲ್ಲಿ ಸತತ 6 ಏಕದಿನ ಪಂದ್ಯ ಗೆದ್ದ ಬಳಿಕ, ಏಕದಿನ ವಿಶ್ವಕಪ್​ನಲ್ಲಿ ಸತತ 11 ಪಂದ್ಯ ಜಯಿಸಿತ್ತು. ಬಳಿಕ ವೆಸ್ಟ್​ ಇಂಡೀಸ್​ ವಿರುದ್ಧ ಸತತ 3 ಟೆಸ್ಟ್​ ಜಯಿಸಿತ್ತು.

ಸ್ಪೇನ್​ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸತತ ಗೆಲುವಿನ ಓಟವನ್ನು ಇದೀಗ 24 ಪಂದ್ಯಗಳಿಗೆ ವಿಸ್ತರಿಸಿದ್ದು, 2028ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯುವ ಹಂಬಲದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net