ಐಸಿಸಿ ಹಾಲ್ ಆಫ್ ಫೇಮ್ಗೆ ಸೌರವ್ ಗಂಗೂಲಿ; ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟ!
ಐಸಿಸಿ ಹಾಲ್ ಆಫ್ ಫೇಮ್ಗೆ ಸೌರವ್ ಗಂಗೂಲಿ; ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟ!
Published on:
Copied
Follow Us
ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಐಸಿಸಿ ಹಾಲ್ ಆಫ್ ಫೇಮ್ಗೆ (ICC Hall of Fame) ಸೇರ್ಪಡೆಯಾಗಲಿದ್ದಾರೆ. ಅವರು ಈ ಗೌರವ ಪಡೆದ 12ನೇ ಭಾರತೀಯ ಎನಿಸಲಿದ್ದಾರೆ.
ಎಡಗೈ ಬ್ಯಾಟರ್ ಹಾಗೂ ನಾಯಕರಾಗಿ ಭಾರತೀಯ ಕ್ರಿಕೆಟ್ ಬೆಳವಣಿಗೆಗೆ ಅಮೋಘ ಕೊಡುಗೆಗಳನ್ನು ನೀಡಿರುವ ಗಂಗೂಲಿ ತನ್ನ 54ನೇ ಜನ್ಮದಿನವಾದ ಬುಧವಾರದಂದು ಈ ಸಿಹಿ ಸುದ್ದಿಯನ್ನು ಪಡೆದಿದ್ದಾರೆ. ಐಸಿಸಿ ಜುಲೈ 11ರಂದು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ.
ಅಪೂರ್ವ ಕವರ್ಡೆವ್ ಮತ್ತು ಆಫ್-ಸೈಡ್ನ ಬಲಿಷ್ಠ ಆಟದಿಂದ "ಗಾಡ್ ಆಫ್ ದಿ ಆಫ್-ಸೈಡ್' ಎಂದೇ ಕರೆಯಲ್ಪಡುವ ಗಂಗೂಲಿ, ಭಾರತೀಯ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ನಿಂದ ಕಂಗೆಟ್ಟಿದ್ದ 2000ನೇ ಇಸವಿಯ ಸಮಯದಲ್ಲಿ ನಾಯಕತ್ವ ಅಲಂಕರಿಸಿ, ವಿದೇಶಿ ನೆಲದಲ್ಲೂ ಭಾರತಕ್ಕೆ ಹೆಚ್ಚಿನ ಯಶಸ್ಸು ತಂದುಕೊಟ್ಟಿದ್ದರು. ಅವರು ಭಾರತ ಪರ 113 ಟೆಸ್ಟ್ಗಳಲ್ಲಿ 16 ಶತಕಗಳ ಸಹಿತ 7,212 ರನ್ ಮತ್ತು 311 ಏಕದಿನಗಳಲ್ಲಿ 22 ಶತಕಗಳ ಸಹಿತ 11,363 ರನ್ ಸಿಡಿಸಿದ್ದಾರೆ. ಜತೆಗೆ 132 ವಿಕೆಟ್ಗಳನ್ನೂ ಕಬಳಿಸಿದ್ದಾರೆ.
ಸುನೀಲ್ ಗಾವಸ್ಕರ್, ಸಚಿನ್ ತೆಂಡುಲ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ ಮುಂತಾದ ಭಾರತೀಯ ಕ್ರಿಕೆಟ್ ದಿಗ್ಗಜರು ಈಗಾಗಲೆ ಐಸಿಸಿ ಹಾಲ್ ಆಫ್ ಫೇಮ್ನಲ್ಲಿ ಸ್ಥಾನ ಪಡೆದಿದ್ದಾರೆ.