ಮುಂಬೈ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (Sony Sports Network) ತನ್ನ ಹೊಸ ಕನ್ನಡ ಚಾನಲ್ಅನ್ನು ಬುಧವಾರ ಆರಂಭಿಸಿದೆ. ಈ ಮೂಲಕ ತನ್ನ ಪ್ರಾದೇಶಿಕ ಜಾಲವನ್ನು ವಿಸ್ತರಿಸಿದೆ. ಸೋನಿ ಈಗಾಗಲೆ ತಮಿಳು ಮತ್ತು ತೆಲುಗಿನಲ್ಲಿ ಚಾನಲ್ಗಳನ್ನು ಹೊಂದಿದೆ. ಸೋನಿ ಸ್ಪೋರ್ಟ್ಸ್ 4 (ಕನ್ನಡ) ಆರಂಭದೊಂದಿಗೆ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಈಗ ಒಟ್ಟು 11 ಕ್ರೀಡಾ ಚಾನಲ್ಗಳನ್ನು ಹೊಂದಿದಂತಾಗಿದೆ.
ಇಂಗ್ಲಿಷ್, ಹಿಂದಿ ಸಹಿತ ಒಟ್ಟು 5 ಭಾಷೆಗಳಲ್ಲಿ ಈ ಚಾನಲ್ಗಳು ವೀಕ್ಷಕ ವಿವರಣೆ ನೀಡುತ್ತವೆ. ಜೂನ್-ಜುಲೈನಲ್ಲಿ ಭಾರತ ತಂಡ ಕೈಗೊಳ್ಳಲಿರುವ ಇಂಗ್ಲೆಂಡ್ ಪ್ರವಾಸದ ಸೀಮಿತ ಓವರ್ ಕ್ರಿಕೆಟ್ ಸರಣಿ ಸೋನಿ ಸ್ಪೋರ್ಟ್ಸ್ ಕನ್ನಡದಲ್ಲೂ ನೇರಪ್ರಸಾರ ಕಾಣಲಿದೆ.
ನಂತರದ ಶ್ರೀಲಂಕಾ, ನ್ಯೂಜಿಲೆಂಡ್ ಪ್ರವಾಸಗಳೂ ಈ ಚಾನಲ್ನಲ್ಲಿ ಪ್ರಸಾರ ಕಾಣಲಿವೆ. ಹಾಲಿ ವರ್ಷದ ಏಷ್ಯನ್ ಗೇಮ್ಸ್ ಕೂಡ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲೇ ನೇರಪ್ರಸಾರ ಕಾಣಲಿದೆ.