ಪಾಕಿಸ್ತಾನದ ಕ್ರಿಕೆಟಿಗನ ವೈವಾಹಿಕ ಜೀವನದಲ್ಲಿ ಬಿರುಕು; ಮೂರನೆಯವಳೇ ಕಾರಣ ಎಂದ ಪತ್ನಿ!

ಪಾಕಿಸ್ತಾನದ ಕ್ರಿಕೆಟಿಗನ ವೈವಾಹಿಕ ಜೀವನದಲ್ಲಿ ಬಿರುಕು
ಪಾಕಿಸ್ತಾನದ ಕ್ರಿಕೆಟಿಗನ ವೈವಾಹಿಕ ಜೀವನದಲ್ಲಿ ಬಿರುಕು
Published on
ಲಾಹೋರ್​: ಶೋಯಿಬ್​ ಮಲಿಕ್​ ಬಳಿಕ ಮತ್ತೋರ್ವ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ (cricket) ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಮಾಜಿ ಆಲ್ರೌಂಡರ್​ ಇಮದ್​ ವಾಸಿಂ (Imad Wasim) ಮತ್ತು ಸಾನಿಯಾ ಅಶ್ಫಕ್​ (Sannia Ashfaq)​ 6 ವರ್ಷಗಳ ದಾಂಪತ್ಯ ಜೀವನದ ಬಳಿಕ ವಿಚ್ಛೇದನ (divorce) ಪಡೆದುಕೊಳ್ಳಲು ಮುಂದಾಗಿದ್ದಾರೆ.
37 ವರ್ಷದ ಇಮದ್​ ವಾಸಿಂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಕಳೆದ ಕೆಲ ವರ್ಷಗಳಿಂದ ಕಾಡುತ್ತಿರುವ ಕೆಲ ಪುನರಾವರ್ತಿತ ಬಿಕ್ಕಟ್ಟುಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಜತೆಗೆ ಯಾವುದೇ ರೀತಿಯ ಊಹಾಪೋಹಗಳನ್ನು ಹರಡಬಾರದು. ಹರಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಸಿದ್ದಾರೆ. ಜತೆಗೆ ತಂದೆಯಾಗಿ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸಿದ್ದಾರೆ.
ಮತ್ತೊಂದೆಡೆ ಸಾನಿಯಾ ಅಶ್ಫಕ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ವಿಚ್ಛೇದನದ ಬಗ್ಗೆ ಪೋಸ್ಟ್​ ಹಾಕಿದ್ದು, ಮೂರನೆಯವಳೇ ನಮ್ಮ ವೈವಾಹಿಕ ಜೀವನ ಮುರಿದುಬೀಳಲು ಕಾರಣ. ಆಕೆ ನನ್ನ ಪತಿಯನ್ನು ವಿವಾಹವಾಗುವ ಬಯಕೆ ಹೊಂದಿದ್ದಳು. ಇದರಿಂದಾಗಿ ನಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ನನ್ನ ಮೂವರು ಮಕ್ಕಳಿಗೆ ಈಗ ತಂದೆ ಇಲ್ಲದಂತಾಗಿದೆ. ನನ್ನ 5 ತಿಂಗಳ ಮಗುವನ್ನು ಇನ್ನೂ ತಂದೆ ಎತ್ತಿ ಹಿಡಿದಿಲ್ಲ. ಇದು ನಾನು ಹಂಚಿಕೊಳ್ಳಲು ಬಯಸಿದ ಸ್ಟೋರಿ ಅಲ್ಲ. ಆದರೆ ನನ್​ ಮೌನ ದೌರ್ಬಲ್ಯ ಎಂದು ಪರಿಗಣಿಸಬಾರದೆಂದು ಈ ಪೋಸ್ಟ್​ ಹಾಕುತ್ತಿರುವೆ. ಇತರ ಎಲ್ಲ ವೈವಾಹಿಕ ಸಂಬಂಧಗಳಂತೆ ನಮ್ಮಲ್ಲೂ ಕೆಲ ಕಷ್ಟಗಳು ಇದ್ದವು. ಆದರೂ ನಾನು ಇದರಲ್ಲಿ ಮುಂದುವರಿಯಲು ಬಯಸಿದ್ದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನವನ್ನೂ ಹಾಕಿದ್ದೆ. ಆದರೆ ಮೂರನೆಯವಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇಮದ್​ ವಾಸಿಂ ಮತ್ತು ಸಾನಿಯಾ ಅಶ್ಫಕ್​​ 2019ರಲ್ಲಿ ವಿವಾಹವಾಗಿದ್ದರು ಮತ್ತು ಮೂವರು ಮಕ್ಕಳನ್ನು ಹೊಂದಿದ್ದಾರೆ. ಇಮದ್​ ವಾಸಿಂ 2015ರಿಂದ 2024ರವರೆಗೆ ಪಾಕಿಸ್ತಾನ ಪರ 55 ಏಕದಿನ ಮತ್ತು 75 ಟಿ20 ಪಂದ್ಯಗಳನ್ನು ಆಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net