ಸ್ಟೈಲಿಶ್ ಲುಕ್‌ನಲ್ಲಿ ಮಿಂಚುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸ್ಮೃತಿ! ಕ್ರಿಕೆಟ್ ತಾರೆ ಧರಿಸಿದ ಜಂಪ್‌ಸೂಟ್ ಬೆಲೆ ಗೊತ್ತೇ?

Smriti  Mandana
Smriti Mandana
Published on
ನವದೆಹಲಿ:ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಮತ್ತು 'ನ್ಯಾಷನಲ್ ಕ್ರಶ್' ಖ್ಯಾತಿಯ ಸ್ಮೃತಿ ಮಂಧಾನ, ಕೇವಲ ಮೈದಾನದಲ್ಲಿ ಮಾತ್ರವಲ್ಲದೆ ಫ್ಯಾಷನ್ ಲೋಕದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಅವರು ಧರಿಸಿದ್ದ ಸುಂದರವಾದ ಜಂಪ್‌ಸೂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಹೌದು, ಸ್ಮೃತಿ ಅವರು ಖ್ಯಾತ ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ವಿಶಿಷ್ಟವಾದ ಕಸೂತಿ ಕೆಲಸವಿರುವ ಜಂಪ್‌ಸೂಟ್ ಧರಿಸಿ ಕಾಣಿಸಿಕೊಂಡಿದ್ದರು. ಇದು ಕ್ಲಾಸಿಕ್ ಮತ್ತು ಮಾಡರ್ನ್ ಲುಕ್‌ನ ಮಿಶ್ರಣವಾಗಿದ್ದು, ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಕಳೆ ನೀಡಿತ್ತು. ಕ್ರೀಮ್ ಬಣ್ಣದ ಈ ಉಡುಪಿನ ಮೇಲೆ ಸೂಕ್ಷ್ಮವಾದ ಹೂವಿನ ವಿನ್ಯಾಸಗಳು ಮತ್ತು ಸುಂದರವಾದ ಎಂಬ್ರಾಯ್ಡರಿ ಕೆಲಸ ಮಾಡಿದೆ.

ಬೆಲೆ ಎಷ್ಟು?

ಈ ಸ್ಟೈಲಿಶ್ ಉಡುಪಿನ ಬೆಲೆ ಕೇಳಿದರೆ ಸಾಮಾನ್ಯ ಜನರು ಒಂದು ಕ್ಷಣ ಅಚ್ಚರಿಪಡುತ್ತಾರೆ. ತರುಣ್ ತಹಿಲಿಯಾನಿ ಅವರ ಅಧಿಕೃತ ವೆಬ್‌ಸೈಟ್ ಮಾಹಿತಿ ಪ್ರಕಾರ, ಈ ಜಂಪ್‌ಸೂಟ್‌ನ ಬೆಲೆ ಸುಮಾರು 63,100. ಕ್ರೀಡಾ ಲೋಕದ ಗ್ಲಾಮರ್ ಐಕಾನ್ ಆಗಿ ಹೊರಹೊಮ್ಮುತ್ತಿರುವ ಸ್ಮೃತಿ ಅವರಿಗೆ ಈ ಉಡುಪು ಅತ್ಯಂತ ಸೂಕ್ತವಾಗಿತ್ತು ಎಂದು ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ಆದ ಫೋಟೋಗಳು

ಸ್ಮೃತಿ ಮಂಧಾನ ಅವರ ಈ ಹೊಸ ಲುಕ್‌ನ ಫೋಟೋಗಳು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ನಲ್ಲಿ ಸಖತ್ ವೈರಲ್ ಆಗಿವೆ. ಕ್ರಿಕೆಟ್ ಮೈದಾನದಲ್ಲಿ ಬೌಲರ್‌ಗಳನ್ನು ಬೆಂಡೆತ್ತುವ ಸ್ಮೃತಿ, ರೆಡ್​​ ಕಾರ್ಪೇಟ್​ ಮೇಲೆ ಮಾಡೆಲ್‌ಗಳಿಗೂ ಪೈಪೋಟಿ ನೀಡುವಂತೆ ಕಾಣುತ್ತಿದ್ದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net