ಮದುವೆ ಮುಂದೂಡಿದ ಬೆನ್ನಲ್ಲೇ ಅನೇಕ ವದಂತಿಗಳು ಹರಿದಾಡಲು ಶುರುವಾಗಿವೆ. ಮದುವೆ ಮುಂದೂಡಲು ಬೇರೆಯದ್ದೇ ಕಾರಣ ಇದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿದೆ. ವದಂತಿಗಳಿಗೆ ಪುಷ್ಠಿ ನೀಡುವಂತೆ ಸ್ಮೃತಿ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಸಹ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಮದುವೆ ಸಂಬಂಧಿಸಿದ ಎಲ್ಲ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಇದಿಷ್ಟೇ ಅಲ್ಲದೆ, ಮತ್ತೊಬ್ಬ ಸಹ ಆಟಗಾರ್ತಿ ರಾಧಾ ಯಾದವ್ ಅವರು ಪಲಾಶ್ ಅವರನ್ನು ಅನ್ ಫಾಲೋ ಮಾಡಿರುವುದು ವದಂತಿಗಳಿಗೆ ಪುಷ್ಠಿ ನೀಡುತ್ತಿದೆ. ಇದರ ನಡುವೆ ಜಾಲತಾಣದಲ್ಲಿ ಪಲಾಶ್ ಅವರು ಯುವತಿಯೊಬ್ಬಳೊಂದಿಗೆ ನಡೆಸಿದ್ದಾರೆ ಎನ್ನಲಾದ ಚಾಟಿಂಗ್ನ ಸ್ಕ್ರೀನ್ ಶಾಟ್ಗಳು ಕೂಡ ವೈರಲ್ ಆಗಿವೆ. ಹೀಗಾಗಿ, ಎರಡೂ ಕುಟುಂಬದಲ್ಲಿ ವೈಮನಸ್ಸು ಮೂಡಿದೆ. ಈ ಮದುವೆ ನಡೆಯುವುದು ಬಹತೇಕು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದು ಕೇವಲ ವದಂತಿಗಳಷ್ಟೇ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಎಲ್ಲಿಯೂ ಹೊರಬಿದ್ದಿಲ್ಲ.