ಹೋಗಿ ಬನ್ನಿ ತವರಿಗೆ... ಛಿದ್ರವಾಯ್ತು ಪಾಕ್​ ಸೆಮೀಸ್​ ಕನಸು! ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ ಲಂಕಾ ಪಡೆ | SL vs PAK

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಸೂಪರ್​-8 ಪಂದ್ಯ
ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಸೂಪರ್​-8 ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಪಲ್ಲೆಕಲೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ-ಪಾಕಿಸ್ತಾನ ನಿರ್ಣಾಯಕ ಸೂಪರ್​-8 ಪಂದ್ಯ
  • ಕಡೆಗೂ ಕಮರಿ ಹೋಯ್ತು ಪಾಕ್​ ಸೆಮೀಸ್​ ಕನಸು
  • 147 ರನ್​ ತಲುಪಿದ ಶ್ರೀಲಂಕಾ, ತಲೆಕೆಳಗಾಯಿತು ಪಾಕಿಸ್ತಾನ ಲೆಕ್ಕಾಚಾರ
ಈ ಕುತೂಹಲಕಾರಿ ಪಂದ್ಯದಲ್ಲಿ ಪಾಕ್​ಗೆ ಗೆಲುವಿಗೆ ಪವಾಡವೇ ನಡೆಯಬೇಕಿತ್ತು. ಇದು ಬಹುತೇಕ ಅನುಮಾನವೇ ಎಂದು ಕ್ರಿಕೆಟ್​ ಪ್ರಿಯರು ಮೊದಲೇ ಭವಿಷ್ಯ ನುಡಿದಿದ್ದರು. ಈ ಬಗ್ಗೆ ಪಾಕ್​ ದೊಡ್ಡ ಲೆಕ್ಕಾಚಾರವನ್ನೇ ಹಾಕಿಕೊಂಡಿತ್ತು. ಆದರೆ, ಈ ಎಲ್ಲಾ ಕಾಲ್ಯುಕ್ಯೂಲೇಷನ್​ ಅನ್ನು ಶ್ರೀಲಂಕಾ ತಲೆಕೆಳಗಾಗಿಸಿದ್ದು ಕ್ರಿಕೆಟ್​ ಪ್ರಿಯರ ಮಾತನ್ನು ಕಡೆಗೂ ಈಡೇರಿಸಿತು.
ಈ ನಿಟ್ಟಿನಲ್ಲಿ, ನ್ಯೂಜಿಲೆಂಡ್​ ಈಗ ಸೆಮಿಫೈನಲ್​ಗೆ ಅಧಿಕೃತವಾಗಿ ಪ್ರವೇಶಿಸಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದಲ್ಲದೇ, ತನ್ನೊಂದಿಗೆ ತವರಿಗೆ ಕರೆದೊಯ್ಯುತ್ತಿರುವ ಶ್ರೀಲಂಕಾ ತಂಡಕ್ಕೆ ಇಡೀ ಭಾರತೀಯ ಕ್ರಿಕೆಟ್​ ಪ್ರೇಮಿಗಳು ಧನ್ಯವಾದಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ, ಪಾಕ್​ಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟ್ ಮಾಡಿದ ಪಾಕಿಸ್ತಾನ, 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 212 ರನ್​ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ, ಆರಂಭಿಕ ಹಂತದಲ್ಲೇ ಬಹುಮುಖ್ಯ ವಿಕೆಟ್​ಗಳನ್ನು ಕಳೆದುಕೊಂಡಿತು. ಇದು ಪಾಕ್​ ಸೆಮೀಸ್​ ಕನಸನ್ನು ಜೀವಂತವಾಗಿರಿಸಿತು. ಆದರೆ, ಲೆಕ್ಕಾಚಾರದ ಪ್ರಕಾರ, 147 ರನ್​ ತಲುಪದಂತೆ ಶ್ರೀಲಂಕಾ ಪಡೆಯನ್ನು ಕಟ್ಟಿಹಾಕುವಲ್ಲಿ ಎಡವಿದ ಪಾಕ್ ಇದೀಗ​ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net