ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 383 ಪಂದ್ಯ ಆಡಿದ್ದ ಅವರು, 86 ಶತಕಗಳ ಸಹಿತ 28,314 ರನ್ ಬಾರಿಸಿದ್ದರು ಮತ್ತು 1,043 ವಿಕೆಟ್ ಕಬಳಿಸಿದ್ದರು. 95 ಲಿಸ್ಟ್ ಎ ಪಂದ್ಯಗಳಲ್ಲಿ 2,721 ರನ್ ಮತ್ತು 109 ವಿಕೆಟ್ ಗಳಿಸಿದ್ದರು. ಐಸಿಸಿ ತನ್ನ ವಾರ್ಷಿಕ ಪ್ರಶಸ್ತಿಯಲ್ಲಿ ಎಲ್ಲ ಕ್ರಿಕೆಟ್ ಪ್ರಕಾರದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ವರ್ಷದ ಕ್ರಿಕೆಟಿಗನಿಗೆ ಗ್ಯಾರಿ ಸೋಬರ್ಸ್ ಹೆಸರಿನಲ್ಲೇ ಪ್ರಶಸ್ತಿ ನೀಡುತ್ತದೆ. ಕ್ರಿಕೆಟ್ ಸಾಧನೆಗಾಗಿ ಅವರಿಗೆ 1975ರಲ್ಲಿ ಬ್ರಿಟನ್ನ ಪ್ರತಿಷ್ಠಿತ ನೈಟ್ಹುಡ್ ಪ್ರಶಸ್ತಿ ನೀಡಲಾಗಿತ್ತು. ಸೋಬರ್ಸ್ 39 ಟೆಸ್ಟ್ಗಳಲ್ಲಿ ವಿಂಡೀಸ್ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದು, 9 ಜಯ, 10 ಸೋಲು, 20 ಡ್ರಾ ಕಂಡಿದ್ದರು.