2ನೇ ಟೆಸ್ಟ್ ಪಂದ್ಯದಿಂದ ಶುಭಮನ್ ಗಿಲ್ ಔಟ್, ಕ್ಯಾಪ್ಟನ್​ ಬದಲಿಗೆ ಈ ಆಟಗಾರ ಎಂಟ್ರಿ!

Shubman Gill
Shubman Gill
Published on
ಪಶ್ಚಿಮ ಬಂಗಾಳ: ಕುತ್ತಿಗೆ ನೋವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ದಿಢೀರ್ ಹೊರನಡೆದ ಕ್ಯಾಪ್ಟನ್ ಶುಭಮನ್ ಗಿಲ್​, ಇದೀಗ ಗುವಾಹಟಿಯಲ್ಲಿ ನಡೆಯುವ ಎರಡನೇ ಪಂದ್ಯದಿಂದ ಕೂಡ ದೂರ ಉಳಿಯಲಿದ್ದಾರೆ ಎಂದು ಗುರುವಾರ ವರದಿಯಾಗಿದೆ.
ಮೊದಲ ಟೆಸ್ಟ್ ಪಂದ್ಯದ 2ನೇ ದಿನದಂದು ಗಿಲ್ ಕುತ್ತಿಗೆಗೆ ಗಾಯವಾದ ನಂತರ ಅವರನ್ನು ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಡಿಚಾರ್ಚ್​ ಮಾಡಲಾಯಿತು. ಅವರು ಪ್ರಾಯೋಗಿಕವಾಗಿ ಫಿಟ್ ಆಗಿರಬಹುದು. ಆದರೆ, ಕಠಿಣ ಅಭ್ಯಾಸದಿಂದ ಸಮಸ್ಯೆಯನ್ನು ಮತ್ತೆ ಉಲ್ಬಣಗೊಳಿಸಬಹುದು. ಹೀಗಾಗಿ, ಎರಡನೇ ಪಂದ್ಯದಿಂದ ದೂರ ಉಳಿಯಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಗಿಲ್ ಬದಲಾಗಿ ಸಾಯಿ ಸುದರ್ಶನ್​

ಶುಭಮನ್ ಗಿಲ್​ ಅವರ ಸ್ಥಾನದಲ್ಲಿ 24 ವರ್ಷದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್​ ತಂಡದ ಭಾಗವಾಗಲಿದ್ದಾರೆ.
ಜೂನ್‌ನಲ್ಲಿ ಇಂಗ್ಲೆಂಡ್‌ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸಾಯಿ ಸುದರ್ಶನ್​, ಇಲ್ಲಿಯವರೆಗೆ ಐದು ಟೆಸ್ಟ್‌ಗಳನ್ನು ಆಡಿದ್ದಾರೆ. 30.33 ರ ಸರಾಸರಿಯಲ್ಲಿ 273 ರನ್ ಗಳಿಸಿದ್ದಾರೆ. ಸಾಯಿ ಸುದರ್ಶನ್​ ಅವರ ಕೊನೆಯ ಪಂದ್ಯವು ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದಿತ್ತು. ಅಲ್ಲಿ ಅವರು 39 ಮತ್ತು 87 ರನ್ ಗಳಿಸಿದ್ದರು. ಸಾಯಿ ಸುದರ್ಶನ್​ ದಕ್ಷಿಣ ಆಫ್ರಿಕಾ ಸರಣಿಗೆ ತಂಡದ ಭಾಗವಾಗಿದ್ದಾರೆ. ಆದರೆ, ಮೊದಲ ಟೆಸ್ಟ್ ಆಡಿಲ್ಲ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net