ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು, ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ತಂಡ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತು. ತಂಡದ ಪರ ಮಿಚೆಲ್ ಮಾರ್ಷ್ (40), ನಾಯಕ ರಿಷಭ್ ಪಂತ್ (43) ಮತ್ತು ಏಡನ್ ಮಾರ್ಕ್ರಾಮ್ (42) ಜವಾಬ್ದಾರಿಯುತ ಆಟವಾಡಿದರೂ, ರನ್ ರೇಟ್ ಏರುತ್ತಲೇ ಹೋದ ಕಾರಣ ಗೆಲುವು ಅಸಾಧ್ಯವಾಯಿತು. ಪಂಜಾಬ್‌ನ ಶಿಸ್ತಿನ ಬೌಲಿಂಗ್ ಮುಂದೆ ಲಕ್ನೋ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಂಜಾಬ್ ಪರ ಮಾರ್ಕೋ ಮಾರ್ಕೋ ಯಾನ್ಸನ್ 2 ವಿಕೆಟ್ ಪಡೆದು ಮಿಂಚಿದರು.