ಐಪಿಎಲ್ ಅನುಭವ ಹೊಂದಿರುವ ಪ್ರಿನ್ಸ್ ಯಾದವ್ ಹಾಗೂ ಯುವ ಆಟಗಾರ ಸೂರ್ಯಂಶ ಶೆಡ್ಗೆ ಅವರ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್, ಪ್ರಿನ್ಸ್ ಯಾದವ್ ಅವರಿಗೆ ಐಪಿಎಲ್‌ನಲ್ಲಿ ಆಡಿದ ಉತ್ತಮ ಅನುಭವವಿದೆ. ಅವರು ಬೌಲಿಂಗ್ ಮಾಡಲು ಬಂದಾಗ, ಕೆಲವು ವಿಶಿಷ್ಟ ಆಲೋಚನೆಗಳು ಮತ್ತು ತಮ್ಮದೇ ಆದ ಸ್ವಂತ ಯೋಜನೆಗಳೊಂದಿಗೆ ಬರುತ್ತಾರೆ. ಅದೇ ರೀತಿ, ಸೂರ್ಯಂಶ ಕೂಡ ಉತ್ತಮ ಯೋಜನೆಗಳೊಂದಿಗೇ ಮೈದಾನಕ್ಕೆ ಪ್ರವೇಶಿಸಿದ್ದರು ಎಂದು ತಂಡದ ಆಟಗಾರರ ಪ್ರಯತ್ನವನ್ನು ಗುರುತಿಸಿದರು.