ತಗೊಳ್ಳಿ ಒಂದು ಪಾಯಿಂಟ್​... ಕೆಕೆಆರ್​ ತಂಡದ ಕಾಲೆಳೆದ ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠ! Shreyas Iyer

ತಗೊಳ್ಳಿ ಒಂದು ಪಾಯಿಂಟ್​... ಕೆಕೆಆರ್​ ತಂಡದ ಕಾಲೆಳೆದ ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠ! Shreyas Iyer
ತಗೊಳ್ಳಿ ಒಂದು ಪಾಯಿಂಟ್​... ಕೆಕೆಆರ್​ ತಂಡದ ಕಾಲೆಳೆದ ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠ! Shreyas Iyer
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೆಕೆಆರ್ ಉತ್ತಮ ದಾಖಲೆಯನ್ನು ಹೊಂದಿದೆ
  • ಮೂರು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಗೆಲುವಿಗಾಗಿ ಪರದಾಟ
  • ಪಂಜಾಬ್​ ಕಿಂಗ್ಸ್​ ವಿರುದ್ಧ ಈಡನ್​ ಗಾರ್ಡನ್ಸ್​ನಲ್ಲಿ ನಡೆಯಬೇಕಿದ್ದ ಪಂದ್ಯ ವರಣನ ಅಡ್ಡಿಯಿಂದಾಗಿ ರದ್ದು
  • ಪಂದ್ಯ ರದ್ದಾದ ಬೆನ್ನಲ್ಲೇ ಕೆಕೆಆರ್​ ತಂಡದ ಕಾಲೆಳೆದ ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠ ಅಯ್ಯರ್​
Shreyas Iyer  : ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೆಕೆಆರ್ ಉತ್ತಮ ದಾಖಲೆಯನ್ನು ಹೊಂದಿದೆ. ಮೂರು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್, ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಒಂದೇ ಒಂದು ಗೆಲುವನ್ನು ಎದುರು ನೋಡುತ್ತಿದೆ. ಒಂದು ಪಂದ್ಯದಲ್ಲಿ ಬೃಹತ್ ಸ್ಕೋರ್ ಗಳಿಸಿದರೂ ಕೂಡ ಗೆಲ್ಲಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಕೆಕೆಆರ್​ ತಂಡ ಕಡಿಮೆ ಸ್ಕೋರ್‌ಗೆ ಆಲೌಟ್ ಆಗಿ ಹೀನಾಯ ಸೋಲುಂಡಿತು. 
ಸೋಮವಾರ (ಏಪ್ರಿಲ್​ 06) ನಡೆದ ಮೂರನೇ ಪಂದ್ಯವನ್ನಾದರೂ ಗೆಲ್ಲಬೇಕೆಂದು ಕೆಕೆಆರ್​ ಬಯಸಿತ್ತು. ಆದರೆ, ಮಳೆ ಆ ಬಯಕೆಯನ್ನು ಹುಸಿಗೊಳಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಪಂದ್ಯ ಒಂದೇ ಒಂದು ಬಾಲ್​ ಮಾಡದೇ ರದ್ದುಗೊಳಿಸಲಾಯಿತು ಮತ್ತು ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು.
ಇದರ ನಡುವೆ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್, ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡವನ್ನು ಉದ್ದೇಶಿಸಿ ಮಾಡಿದ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ಕೆಕೆಆರ್-ಪಂಜಾಬ್ ಪಂದ್ಯ ರದ್ದಾದ ಕೆಲವೇ ಸಮಯದಲ್ಲಿ ಶ್ರೇಷ್ಠ ಅಯ್ಯರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡರು.
ನಮ್ಮ ಪಂಜಾಬಿಗಳು ದೊಡ್ಡ ಹೃದಯವನ್ನು ಹೊಂದಿದ್ದಾರೆ. ಅದಕ್ಕಾಗಿಯೇ ನಾವು ಕೆಕೆಆರ್‌ಗೆ ಒಂದು ಅಂಕವನ್ನು ನೀಡಿದ್ದೇವೆ. ನಿಮ್ಮ ಜೀವಕ್ಕಾಗಿ ಹೋರಾಡಿ ಎಂದು ಪಂಜಾಬಿಯಲ್ಲಿ ನೃತ್ಯ ಮಾಡುತ್ತಾ ಹೇಳಿದರು. ಇದೀಗ ಶ್ರೇಷ್ಠಾ ಅವರ ಕಾಮೆಂಟ್‌ಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಕೆಆರ್​ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ನಿಮ್ಮ ಸಹೋದರನ ನಾಯಕತ್ವದಲ್ಲಿ ಕೆಕೆಆರ್ ವಿಜೇತರಾದರು ಎಂಬುದನ್ನು ನೀವು ಮರೆತಿದ್ದೀರಾ ಎಂದು ಶ್ರೇಷ್ಠ ಅಯ್ಯರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಅಂದಹಾಗೆ, ಶ್ರೇಯಸ್ ಅಯ್ಯರ್ 2024ರ ಐಪಿಎಲ್​ ಋತುವಿನಲ್ಲಿ ಕೆಕೆಆರ್ ತಂಡದ ನಾಯಕರಾಗಿದ್ದರು. ಅಲ್ಲದೆ, ಆ ಸೀಸನ್​ನಲ್ಲಿ ಟ್ರೋಫಿ ಸಹ ಗೆಲ್ಲಿಸಿಕೊಟ್ಟಿರು. ಆದರೆ, ಗೆಲುವಿನ ಕ್ರೆಡಿಟ್ ಸಂಪೂರ್ಣವಾಗಿ ಗೌತಮ್ ಗಂಭೀರ್‌ಗೆ ಹೋಯಿತು. ಇದರಿಂದ ಬೇಸರಗೊಂಡ ಅಯ್ಯರ್​, ಕೆಕೆಆರ್​ ತಂಡವನ್ನು ತೊರೆದು ಪಂಜಾಬ್ ಕಿಂಗ್ಸ್‌ನ ನಾಯಕನಾಗಿ ಅಧಿಕಾರ ವಹಿಸಿಕೊಂಡರು. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಶ್ರೇಷ್ಠ ಅಯ್ಯರ್, ಕೆಕೆಆರ್ ತಂಡವನ್ನು ಟ್ರೋಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಪಷ್ಟನೆ ನೀಡಿದ ಅಯ್ಯರ್​ ಸಹೋದರಿ

ಶ್ರೇಷ್ಠ ಅಯ್ಯರ್ ಇತ್ತೀಚೆಗೆ ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಯಾರನ್ನೂ ಅಗೌರವಿಸುವ ಉದ್ದೇಶದಿಂದ ಈ ಪೋಸ್ಟ್ ಮಾಡಿಲ್ಲ. ನಾನು ಅದನ್ನು ತಮಾಷೆಯ ರೀತಿಯಲ್ಲಿ ಪೋಸ್ಟ್ ಮಾಡಿದ್ದೇನೆ. ಆಟವನ್ನು ಆಟವಾಗಿ ನೋಡಿ. ನನಗೆ ಯಾವುದೇ ತಂಡದ ಬಗ್ಗೆ ದ್ವೇಷವಿಲ್ಲ. ಪ್ರತಿಯೊಬ್ಬರೂ ಇದನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು. ನಾನು ಯಾರನ್ನೂ ಟ್ರೋಲ್ ಮಾಡಲು ಬಯಸಲಿಲ್ಲ. ಇದೊಂದು ಸಣ್ಣ ವಿಷಯ. ದಯವಿಟ್ಟು ಶಾಂತವಾಗಿರಿ ಎಂದು ಹೇಳಿದ್ದಾರೆ.
ಕಳೆದ ವರ್ಷ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯವೂ ಮಳೆಯಿಂದ ರದ್ದಾಯಿತು. ಆ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮುಗಿಸಿತ್ತು. ಆದರೆ, ಮಳೆ ಕೆಕೆಆರ್‌ನ ಇನ್ನಿಂಗ್ಸ್‌ಗೆ ಅಡ್ಡಿಪಡಿಸಿತು. ಇದೀಗ ಮತ್ತೆ ಮಳೆ ಕಾಟ ಕೊಟ್ಟಿದೆ. ಪಂದ್ಯ ರದ್ದಾದ ಬಳಿಕ ಕೆಕೆಆರ್​ ತಂಡ ಒಂದು ಅಂಕದೊಂದಿಗೆ ಐಪಿಎಲ್​ನಲ್ಲಿ ಖಾತೆ ತೆರೆದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net